ಮಂಗಳೂರು (ಒಡಿಶಾ): ದೇಶದಲ್ಲಿ ಇದೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ ಬಳಸಿ ಸುದ್ದಿ ವಾಹಿನಿಯೊoದು ಮೊದಲ ಎಐ ನಿರೂಪಕಿಯನ್ನು ಪರಿಚಯಿಸಿದೆ. ಕೆಂಪು, ಹಳದಿ ಬಣ್ಣದ ಕೈಮಗ್ಗದ ಸೀರೆ ಉಟ್ಟ ರೀತಿಯಲ್ಲಿ ರೂಪಿಸಲಾಗಿರುವ ಕೃತಕ ಮಹಿಳೆಗೆ ಒಡಿಶಾ ಟೆಲಿವಿಷನ್ ಸಂಸ್ಥೆ ಲೀಸಾ ಎಂದು ನಾಮಕರಣ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಓಟಿವಿ ಡಿಜಿಟಲ್ ಬ್ಯುಸಿನೆಸ್ ಹೆಡ್ ಲಿತಿಶಾ ಮಂಗತ್ ಪಾಂಡಾ, ಓ ಟಿವಿಯ ಎಐ ನ್ಯೂಸ್ ನಿರೂಪಕಿ ಲೀಸಾ ಹಲವು ಭಾಷೆಗಳನ್ನು ಮಾತನಾಡಲಿದ್ದಾರೆ. ಲೀಸಾಗೆ ತರಬೇತಿ ನೀಡುವುದು ದೊಡ್ಡ ವಿಷಯವಾಗಿತ್ತು. ಕೊನೆಗೂ ನಾವು ಲೀಸಾಗೆ ತರಬೇತಿ ನೀಡಿ ಸುದ್ದಿಯನ್ನು ಜನರ ಮುಂದಿಟ್ಟಿದ್ದೇವೆ. ಕೃತಕ ಬುದ್ಧಿಮತ್ತೆ ಆಧಾರಿತ ಟಿವಿ ನಿರೂಪಕಿಗೆ ಇನ್ನಷ್ಟು ತರಬೇತಿ ನೀಡುತ್ತೇವೆ. ಈ ಮೂಲಕ ಮತ್ತಷ್ಟು ಬದಲಾವಣೆಗಳಿಗೆ ನಾವು ತೆರೆದುಕೊಳ್ಳಲಿದ್ದೇವೆ. ಲೀಸಾ ಬೇರೆಯವರ ಜೊತೆ ಸಂವಾದ ಮಾಡುವಂತೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ದೇಶದ ಮೊದಲ ಎಐ ಸುದ್ದಿ ನಿರೂಪಕಿಯನ್ನು ಒಡಿಶಾ ಟಿವಿ ಸುದ್ದಿ ವಾಹಿನಿಯು ಪರಿಚಯಿಸಿದ್ದು ಹೊಸ ಪ್ರಯೋಗಕ್ಕೆ ದೇಶದ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.