ಸಿಂಹ (Panthera leo)
ಮಕ್ಕಳಿಗಾಗಿ ವಿಶೇಷ ಮಾಹಿತಿ
ಫೆಲಿಡೇ ಕುಟುಂಬದ ವರ್ಗ ಪಾಂಥೇರಾ ತಳಿಯು ಇದಾಗಿದೆ. ಗಂಡು ಸಿಂಹವು 250 ಕೆ.ಜಿ ತೂಕ ಹೊಂದಿರುತ್ತದೆ. ಸಿಂಹಗಳು 10-14 ವರ್ಷ ಬದುಕುತ್ತವೆ, ಸಂರಕ್ಷಿಸಿದಲ್ಲಿ 20 ವರ್ಷಗಳು ಬದುಕಬಲ್ಲದು.
ಸಿಂಹವು ನಿಶಾಚರಿ ಪ್ರಾಣಿಯಾಗಿದೆ. ಗುಂಪುಗಳಲ್ಲಿ ವಾಸಿಸುತ್ತದೆ. ಮುಖ್ಯವಾಗಿ ಈ ಗುಂಪು ತನ್ನದೇ ಕುಂಟುಂಬದ್ದಾಗಿರುತ್ತದೆ. ಮರಿಗಳೊಂದಿಗೆ ಗುಂಪಿನಲ್ಲಿ ಬೀಡು ಬಿಟ್ಟಿರುತ್ತದೆ. ಗಂಡು ಸಿಂಹವನ್ನು ಕೇಸರಿಯಿಂದಲೇ ಕಂಡುಹಿಡಿಯಬಹುದು. ಒಟ್ಟಿಗೆ ಬೇಟೆಯಾಡುತ್ತದೆ. ಹೆಚ್ಚಾಗಿ ಸಣ್ಣ ಜಿಂಕೆಗಳು, ಸಣ್ಣ ಸಸ್ತನಿಗಳು, ಗೋವುಗಳು, ಆಡು, ಕುರಿಗಳನ್ನು ಬೇಟೆಯಾಡುತ್ತದೆ.
ಹೆಚ್ಚು ಆಯುಷ್ಯವನ್ನು ಹೋಂದಬಹುದಾದರೂ ಬೇಟೆಯಾಡುವಾಗ, ತನ್ನ ಕುಟುಂಬ ಸದಸ್ಯರನ್ನು ಇತರ ಸಿಂಹಗಳಿಂದ ರಕ್ಷಿಸಿಕೊಳ್ಳುವಾಗ ಸೋಂಕು ತಗುಲಿದಾಗ, ಬಸವಳಿದು ಆಯುಷ್ಯ ಕ್ಷೀಣಿಸುತ್ತದೆ.
ಹೆಚ್ಚಾಗಿ ಸವನ್ನ ಹುಲ್ಲುಗಾವಲು ಪ್ರದೇಶಗಳಲ್ಲಿ ಕಾಣಬಹುದು. ಕಳೆದ ಎರಡು ದಶಕಗಳಲ್ಲಿ ಸಂತತಿಯು ಸಾಕಷ್ಟು ಕಡಿಮೆಯಾಗಿದ್ದು 30-50% ಇಳಿಮುಖ ಹೊಂದಿದ್ದು ಇದು ಗಮನಾರ್ಹ ವಿಷಯವಾಗಿದೆ. ವಾಸ ಪ್ರದೇಶದ ಕೊರತೆಯಿಂದಾಗಿ ವಿನಾಶದ ಹಾದಿಯತ್ತ ಸಾಗಬೇಕಾಗಿದೆ. ಆಫ್ರಿಕಾ ಖಂಡದಲ್ಲಿ ಹೆಚ್ಚಾಗಿ ಕಾಣುವ ಸಿಂಹಗಳು ಯೂರೋಪ್, ಏಷಿಯಾದಲ್ಲಿಯಾ ಭಾರತದ ಗಿರ್ ಅರಣ್ಯಪ್ರದೇಶ, ಪೆರೂ ಅಮೇರಿಕಾದಲ್ಲಿಯೂ ಕಾಣಬಹುದು.
ಪ್ರಾಣಿ ಸಂರಕ್ಷಣಾ ಘಟಕಗಳು, ವನ್ಯಜೀವಿ ಇಲಾಖೆಯವರು ಈ ದೈತ್ಯ, ಸ್ಪುರದ್ರೂಪಿ, ಸುಂದರ ವನ್ಯಜೀವಿಯನ್ನು ಉಳಿಸಲು ಅವಿರತವಾಗಿ ಪ್ರಯತ್ನಿಸುತ್ತಿದೆ. ಈಗ ಇದರ ಹೆಚ್ಚಿನ ಸಾಂದ್ರತೆ ಆಫ್ರಿಕಾದ ಸಹಾರ ಮರುಭೂಮಿಯ ಪ್ರದೇಶದಲ್ಲಿ ಇದೆ.