ಸುರತ್ಕಲ್ ಸೆಕೆಂಡ್ ಹ್ಯಾಂಡ್ ಕಾರ್ ಶೋರೂಮ್ ನಿಂದ 2 ಕಾರು ಕಳವು – ದೂರು ದಾಖಲು

ಮಂಗಳೂರು: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಜಂಕ್ಷನ್ ಬಳಿ ಇರುವ ಸೂರಲ್ಪಾಡಿ ನಿವಾಸಿ ಆಬಿದ್ ಅಹಮದ್ ಎಂಬವರಿಗೆ ಸೇರಿದ್ದ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಳಿಗೆಗೆ ನುಗ್ಗಿದ ಕಳ್ಳರು ಎರಡು ಕಾರುಗಳನ್ನು ಕಳವು ಗೈದು ಪರಾರಿಯಾಗಿರುವ ಘಟನೆ ಜುಲೈ 12ರ ತಡರಾತ್ರಿ ನಡೆದಿದೆ.

ಮಳಿಗೆಯ ಮುಂಭಾಗದ ಗಾಜಿನ ಬಾಗಿಲನ್ನು ಸುತ್ತಿಗೆಯಿಂದ ಹೊಡೆದು ಪುಡಿ ಮಾಡಿ ಒಳಹೊಕ್ಕ ಕಳ್ಳರು ಕಚೇರಿಯ ಒಳಗೆ ಜಾಲಾಡಿದ್ದಾರೆ. ಬಳಿಕ ಡ್ರಾಯರ್ ಒಡೆದು ಅದರಲ್ಲಿ ಮಾರಾಟಕ್ಕೆ ಇಟ್ಟಿದ್ದ ಕಾರಿನ ಕಾಗದ ಪತ್ರದ ಜೊತೆಗೆ ಎರಡು ಕಾರುಗಳನ್ನು ಕಳವು ಗೈದಿದ್ದಾರೆ. ಕಳ್ಳರು 6 ಲಕ್ಷ ರೂಪಾಯಿ ಮೌಲ್ಯದ ಕೆಂಪು ಬಣ್ಣದ ಸ್ವಿಫ್ಟ್ ಕಾರು, 9 ಲಕ್ಷ ರೂಪಾಯಿ ಮೌಲ್ಯದ ಗ್ರೇಟಾ ಕಾರು ಸೇರಿ ಒಟ್ಟು 15 ಲಕ್ಷ ರೂಪಾಯಿ ಮೌಲ್ಯದ ಎರಡು ಕಾರುಗಳನ್ನು ಕಳವು ಗೈದಿದ್ದಾರೆ.

ರೈನ್ ಕೋಟ್ ಮತ್ತು ಹೆಲ್ಮೆಟ್ ಧರಿಸಿದ್ದ ಕಳ್ಳರ ಕೈಚಳಕ ಕಚೇರಿಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಾಲಕ ಆಬಿದ್ ನೀಡಿದ ದೂರಿನಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here