ಮಂಗಳೂರು: ಜಪಾನ್ ಬಾಹ್ಯಾಕಾಶ ಏಜೆನ್ಸಿಯ ರಾಕೆಟ್ ಇಂಜಿನ್ ಶುಕ್ರವಾರ ಟೆಸ್ಟಿಂಗ್ ಸಂದರ್ಭದಲ್ಲಿ ಸ್ಪೋಟಗೊಂಡಿರುವುದಾಗಿ ಕ್ಯೋಡೋ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸ್ಪೋಟದಲ್ಲಿ ಯಾವುದೇ ಹಾನಿಯಾಗಿಲ್ಲ. ಆದರೆ ದೇಶದ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಯೋಜನೆಗೆ ಹಿನ್ನಡೆಯಾಗಿದೆ ಎಂದು ಜಪಾನ್ ನ ಶಿಕ್ಷಣ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಅಕಿಟ ಪ್ರಾಂತ್ಯದಲ್ಲಿನ ನೋಶಿರೋ ಟೆಸ್ಟಿಂಗ್ ಸೆಂಟರ್ ನಲ್ಲಿ ಜಪಾನ್ ಏರೋ ಸ್ಪೇಸ್ ಎಕ್ಸ್ ಪ್ಲೋರೇಶನ್ ಏಜೆನ್ಸಿ ನಡೆಸಿದ ಎಬ್ಸಿಲನ್ ಎಸ್ ರಾಕೆಟ್ ನ ಎರಡನೇ ಹಂತದ ಇಂಜಿನ್ ನ ನೆಲಹಂತದ ಪರೀಕ್ಷೆಯ ಸಂದರ್ಭ ಇಂಜಿನ್ ಸ್ಫೋಟಗೊಂಡಿದೆ. ಸ್ಪೋಟದ ತೀವ್ರತೆಗೆ ಕಟ್ಟಡದ ಚಾವಣಿ ಹಾಗೂ ಒಂದು ಬದಿಯ ಗೋಡೆಗೆ ಹಾನಿಯಾಗಿದೆ. ಕಟ್ಟಡಕ್ಕೆ ಬೆಂಕಿ ಹತ್ತಿಕೊಂಡಿದ್ದು ಅಗ್ನಿಶಾಮಕ ದಳದವರು ಬೆಂಕಿಯನ್ನು ನಿಯಂತ್ರಿಸಿದ್ದಾರೆ ಎಂದು ವರದಿಯಾಗಿದೆ.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
??
In Japan, an Epsilon S rocket exploded during testing, the explosion occurred a minute after the start of testing the rocket engine. pic.twitter.com/l27zd1cRVp— tank on the boy (@TankThe1702) July 14, 2023