ಮಂಗಳೂರು(ತುಮಕೂರು): ಆಟವಾಡುತ್ತಾ ಬಾವಿಗೆ ಬಿದ್ದಿದ್ದ ತಂಗಿಯನ್ನು ಎಂಟು ವರ್ಷದ ಅಕ್ಕ ರಕ್ಷಿಸಿರುವ ಘಟನೆ ತುಮಕೂರಿನ ಕುಚ್ಚಂಗಿಯಲ್ಲಿ ನಡೆದಿದೆ. ಆಟವಾಡುತ್ತಾ ಬಾವಿಗೆ ಬಿದ್ದಿದ್ದ ತಂಗಿ ಹಿಮಾಂಶು ಎಂಬವಳನ್ನು ಅಕ್ಕ ಶಾಲೂ ಜೀವದ ಹಂಗು ತೊರೆದು ರಕ್ಷಿಸಿದ್ದಾಳೆ.
ಉತ್ತರ ಪ್ರದೇಶ ಮೂಲದ ದಂಪತಿ ಕುಚ್ಚಂಗಿ ತೋಟದ ಮನೆಯಲ್ಲಿ ಕೆಲಸಕ್ಕಿದ್ದರು. ದಂಪತಿಗೆ ನಾಲ್ವರು ಮಕ್ಕಳ ಪೈಕಿ ಹಿಮಾಂಶು ಹಾಗೂ ಕಪಿಲ್ ತೋಟದಲ್ಲಿ ಆಟವಾಡುತ್ತಾ ಇದ್ದಾಗ ಬಾವಿಗೆ ಚೆಂಡು ಬಿದ್ದಿದೆ. ಬಾವಿಯಲ್ಲಿ ಬಿದ್ದಿದ್ದ ಚೆಂಡು ತೆಗೆಯಲು ಹೋಗಿ ಹಿಮಾಂಶು ನೀರಿನಲ್ಲಿ ಮುಳುಗುವ ಹಂತಕ್ಕೆ ತಲುಪಿದ್ದಾಳೆ. ಇದನ್ನು ಕಂಡ ಅಕ್ಕ ಶಾಲೂ ಮನೆಯೊಳಗಿದ್ದ ಲೈಫ್ ಜಾಕೆಟ್ ಧರಿಸಿ ನೀರು ತುಂಬಿದ್ದ ಬಾವಿಗೆ ಜಿಗಿದು ತಂಗಿಯನ್ನು ರಕ್ಷಿಸಿದ್ದಾಳೆ. ಈ ವೇಳೆ ಆಕೆ ಸಹಾಯಕ್ಕೆ ಬಂದ ಅಕ್ಕಪಕ್ಕದ ಜನರು ಇಬ್ಬರು ಮಕ್ಕಳನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ.