ಮಂಗಳೂರು (ಮುಂಬೈ): ತಾಯಿಯೊಬ್ಬಳು ಪುಟ್ಟ ಮಕ್ಕಳ ಕಣ್ಣ ಮುಂದೆ ಸಮುದ್ರದ ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋದ ಹೃದಯವಿದ್ರಾವಕ ಘಟನೆ ಮುಂಬೈಯ ಬಾಂದ್ರಾದ ಬ್ಯಾಂಡ್ ಸ್ಟ್ಯಾಂಡ್ ನಲ್ಲಿ ನಡೆದಿದೆ.
ಅಲೆಯ ಸೆಳೆತಕ್ಕೊಳಗಾಗಿ ಮೃತಪಟ್ಟ ಮಹಿಳೆಯನ್ನು ಜ್ಯೋತಿ ಸೋನಾರ್(32) ಎಂದು ಗುರುತಿಸಲಾಗಿದೆ. ಜ್ಯೋತಿ ಪತಿ ಹಾಗೂ ಮಕ್ಕಳೊಂದಿಗೆ ಪಿಕ್ನಿಕ್ ಎಂದು ಜೂಹಿ ಚೌಟಿಗೆ ಬಂದಿದ್ದರು. ಆದರೆ ಅಲೆಗಳ ಅಬ್ಬರ ಹೆಚ್ಚಾಗಿರುವ ಕಾರಣ ಜೂಹು ಬೀಚ್ ಗೆ ಪ್ರವೇಶ ನಿಷೇಧಿಸಲಾಗಿತ್ತು. ಹೀಗಾಗಿ ಕುಟುಂಬ ಬಾಂದ್ರಾ ಬ್ಯಾಂಡ್ ಸ್ಟ್ಯಾಂಡಿಗೆ ಬಂದಿತ್ತು.
ಬಾಂದ್ರಾದಲ್ಲಿ ಸಮುದ್ರದ ಬಳಿ ಜ್ಯೋತಿ ತನ್ನ ಪತಿ ಜೊತೆ ಫೋಟೋ ತೆಗೆಸಿಕೊಳ್ಳಲು ಬಂಡೆಯೊಂದರ ಮೇಲೆ ಕುಳಿತಿದ್ದಾರೆ. ಅಲೆಗಳು ಅಪ್ಪಳಿಸುತ್ತಿದ್ದರೂ ಜ್ಯೋತಿ ಫೋಟೋಗಾಗಿ ಗಂಡನನ್ನು ಹಿಡಿದುಕೊಂಡು ಕುಳಿತಿದ್ದಾರೆ. ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟು ಖುಷಿಯಿಂದ ಪೋಸ್ ಕೊಟ್ಟಿದ್ದಾರೆ ಆದರೆ ರಭಸವಾಗಿ ಅಪ್ಪಳಿಸಿದ ರಕ್ಕಸ ಗಾತ್ರದ ಅಲೆಯೊಂದು ಜ್ಯೋತಿಯವರನ್ನು ಎಳೆದುಕೊಂಡು ಹೋಗಿದೆ. ಇದನ್ನು ನೋಡಿದ ಮಕ್ಕಳು ಮಮ್ಮಿ ಮಮ್ಮಿ ಎಂದು ಕೂಗಲು ಶುರುವಿಟ್ಟಿದ್ದಾರೆ. ಸ್ಥಳೀಯ ನಿವಾಸಿ ಮುಕೇಶ್ ಎನ್ನುವವರು ಜ್ಯೋತಿಯವರ ಸೀರೆ ಹಿಡಿದು ರಕ್ಷಿಸಲು ಮುಂದಾದರು ಅವರ ಪ್ರಯತ್ನ ವಿಫಲವಾಗಿದೆ. ಮಾಹಿತಿ ಪಡೆದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿ ಜ್ಯೋತಿಯವರ ಮೃತ ದೇಹವನ್ನು ಹೊರ ತೆಗೆದಿದ್ದಾರೆ. ಘಟನೆಯ ವಿಡಿಯೋ ಈಗ ವೈರಲ್ ಆಗಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
This is so horrible How can a person risk their life for some videos..
The lady has swept away and lost her life in front of his kid.#bandstand #Mumbai pic.twitter.com/xMat7BGo34— Pramod Jain (@log_kyasochenge) July 15, 2023