ಮಂಗಳೂರು(ಹೊಸದಿಲ್ಲಿ): ಜುಲೈ 8 ರಂದು ಹರ್ಯಾಣದ ಸೋನಿಪತ್ ನ ಮದೀನಾ ಗ್ರಾಮಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಅವರು ರೈತರೊಂದಿಗೆ ಸಂವಾದ ನಡೆಸಿದ್ದರು. ಆ ಸಮಯದಲ್ಲಿ ರೈತರು ದಿಲ್ಲಿಯಲ್ಲಿರುವ ರಾಹುಲ್ ಗಾಂಧಿ ಅವರ ಮನೆಯನ್ನು ನೋಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಇದೀಗ ರೈತ ಮಹಿಳೆಯರು ದಿಲ್ಲಿಗೆ ತೆರಳುವ ಮೂಲಕ ತಮ್ಮ ಆಸೆಯನ್ನು ಈಡೇರಿಸಿಕೊಂಡಿದ್ದಲ್ಲದೆ, ಸೋನಿಯಾ ಗಾಂಧಿ ಅವರೊಂದಿಗೆ ಊಟ ಮಾಡಿ, ಅವರೊಂದಿಗೆ ಕುಣಿದು ಕುಪ್ಪಳಿಸುವ ಅವಕಾಶವನ್ನೂ ಪಡೆದರು.
ಹರ್ಯಾಣದ ಮಹಿಳಾ ರೈತರು ರಾಹುಲ್ ಗಾಂಧಿ ಅವರ ಬಳಿ ದಿಲ್ಲಿ ಮನೆಯನ್ನು ನೋಡುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ನನ್ನ ಮನೆಯನ್ನು ಸರಕಾರ ಕಿತ್ತುಕೊಂಡಿದೆ ಎಂದು ರಾಹುಲ್ ಹೇಳಿದ್ದರು. ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ರಾಹುಲ್ ಗಾಂಧಿಯಿಂದ ದಿಲ್ಲಿಗೆ ಆಹ್ವಾನಿಸಲ್ಪಟ್ಟ ಹರ್ಯಾಣದ ಮಹಿಳಾ ರೈತರೊಂದಿಗೆ ಊಟ ಮಾಡಿದರು. ಗಾಂಧಿ ಕುಟುಂಬವನ್ನು ಶ್ಲಾಘಿಸಿ ಹಲವಾರು ಜನರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
Women farmers from Haryana had expressed their desire to @RahulGandhi to see Delhi and his house. He told them that the Govt has taken away his house.
But just see what happened next.
This video is pure joy! ❤️ pic.twitter.com/1cqAeSW5xg
— Ruchira Chaturvedi (@RuchiraC) July 16, 2023
Women farmers who met Raga a few days ago in sonepat Haryana were welcomed at 10 Janpath Delhi
They had lunch with Sonia Gandhi ji, @priyankagandhi & @RahulGandhiiFanNo one sat down all sat on the chairs & had food on the dining table and everyone had the same food pic.twitter.com/P8UHsA2LxP
— Shamila Siddiqui (@rebelioushamila) July 16, 2023