ರಷ್ಯಾದ ಕ್ರಿಮಿಯಾ ಸೇತುವೆ ಸ್ಫೋಟ-ಭಾರೀ ಹಾನಿ-ದಂಪತಿಗಳ ಸಾವು

ಮಂಗಳೂರು(ಮಾಸ್ಕೋ): ಭಾರೀ ಸ್ಫೋಟ ಸಂಭವಿಸಿದ್ದರಿಂದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಕನಸಿನ ಯುರೋಪಿನ ಉದ್ದದ ಕ್ರಿಮಿಯಾ ಸೇತುವೆಗೆ ಮತ್ತೆ ಹಾನಿಯಾಗಿದೆ. ಈ ಸ್ಫೋಟದಿಂದ ಕ್ರಿಮಿಯಾ ಮತ್ತು ರಷ್ಯಾ ನಡುವಿನ ಸಂಪರ್ಕ ಕಡಿತಗೊಂಡಿದೆ.

ಈ ಸ್ಫೋಟದಲ್ಲಿ ರಷ್ಯಾದ ಬೆಲ್ಗೊರೊಡ್ ಪ್ರದೇಶದ ದಂಪತಿ ಸಾವನ್ನಪ್ಪಿದ್ದಾರೆ. ಹೆಣ್ಣುಮಗುವೊಂದು ಗಾಯಗೊಂಡಿದೆ. ಈ ಸ್ಫೋಟದ ಹಿಂದೆ ಉಕ್ರೇನ್‌ ಕೈವಾಡವಿದೆ ಎಂದು ರಷ್ಯಾ ಆರೋಪಿಸಿದೆ.
ರಷ್ಯಾದ ಯೋಧರಿಗೆ ಸಾಮಗ್ರಿಗಳನ್ನು ತಲುಪಿಸುವ ಪ್ರಮುಖ ಮಾರ್ಗವಾಗಿರುವ ಕ್ರಿಮಿಯಾ ಸೇತುವೆ ಮೇಲೆ ಕಳೆದ ಅಕ್ಟೋಬರ್‌‌ನಲ್ಲೂ ದಾಳಿ ನಡೆದಿತ್ತು.

ಹಲವು ತಿಂಗಳ ಬಳಿಕ ಸೇತುವೆಯನ್ನು ಸಂಪೂರ್ಣವಾಗಿ ದುರಸ್ತಿಗೊಳಿಸಲಾಗಿತ್ತು. ಇದೀಗ ಮತ್ತೊಂದು ದಾಳಿ ನಡೆದಿದೆ. ಬೆಳಗಿನ ಜಾವ 3:04 ಗಂಟೆಯಿಂದ 3:20ರ ಸುಮಾರಿಗೆ ಸೇತುವೆ ಸ್ಫೋಟಗೊಂಡಿದೆ ಎಂದು ಬೆಲ್ಗೊರೊಡ್‌ನ ಗವರ್ನರ್ ವ್ಯಾಚೆಸ್ಲಾವ್ ಗ್ಲಾಡ್‌ಕೋವ್ ತಿಳಿಸಿದ್ದಾರೆ.
ಉಕ್ರೇನ್‌ನ ಒಡೆಸಾ ಮಿಲಿಟರಿ ಆಡಳಿತದ ವಕ್ತಾರ ಸೆರ್ಹಿ ಬ್ರಾಚುಕ್ ತಮ್ಮ ಟೆಲಿಗ್ರಾಮ್ ಖಾತೆಯಲ್ಲಿ ಸೇತುವೆಯ ಭಾಗವು ಮುರಿದುಹೋಗಿರುವ ಫೋಟೋ ಹಂಚಿಕೊಂಡಿದ್ದಾರೆ.

ಕಪ್ಪುಸಮುದ್ರ ಮತ್ತು ಅಜೋವ್ ಸಮುದ್ರ ಸಂಪರ್ಕಿಸುವ ಕ್ರೆಚ್ ಜಲಸಂಧಿಗೆ ಅಡ್ಡಲಾಗಿ ಈ ಸೇತುವೆ ನಿರ್ಮಿಸಲಾಗಿದ್ದು, 19 ಕಿ.ಮೀ. ಉದ್ದವಿದೆ. ಇದು ಯೂರೋಪ್‌ನಲ್ಲಿಯೇ ಅತಿ ಉದ್ದದ ಸೇತುವೆ ಎನಿಸಿದೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

 

LEAVE A REPLY

Please enter your comment!
Please enter your name here