ಬಂಟ್ವಾಳದ ಬಾಂಬಿಲದಲ್ಲಿ ಮನೆಯ ಮೇಲೆ ಬಿದ್ದ ಲಾರಿ

ಮಂಗಳೂರು (ಬಂಟ್ವಾಳ): ಮಂಗಳೂರಿನಿಂದ ಧರ್ಮಸ್ಥಳದ ಕಡೆ ಸಾಗುವ ಲಾರಿ ನಿಯಂತ್ರಣ ತಪ್ಪಿ ಮನೆಯ ಮೇಲೆ ಬಿದ್ದ ಘಟನೆ ಬಂಟ್ವಾಳ ತಾಲೂಕಿನ ವಗ್ಗ ಸಮೀಪದ ಬಾಂಬಿಲದಲ್ಲಿ ನಡೆದಿದೆ.

ಭಜರಂಗಿ ರೋಡ್ ಲೈನ್ಸ್ ಸಂಸ್ಥೆಗೆ ಸೇರಿದ ಈ ಲಾರಿಯಲ್ಲಿದ್ದ ಕೆಂಪು ಇಟ್ಟಿಗೆ ಘಟನಾ ಸ್ಥಳದಲ್ಲಿ  ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ರಸ್ತೆ ಬದಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ತಡೆ ಬೇಲಿ ಮುರಿದು ಮನೆಯ ಶೆಡ್ ಮೇಲೆ ವಾಹನ ಬಿದ್ದಿದೆ.

LEAVE A REPLY

Please enter your comment!
Please enter your name here