ಕಾರಿಗೆ ಫುಲ್ ಟ್ಯಾಂಕ್ ಪೆಟ್ರೋಲ್ ತುಂಬಿಸಿ ಹಣ ಪಾವತಿಸದೇ ಪರಾರಿ

ಮಂಗಳೂರು: ಕಾರಿಗೆ ಪೆಟ್ರೋಲ್ ತುಂಬಿಸಿ ಹಣ ಪಾವತಿಸದೆ ಪರಾರಿಯಾಗಿರುವ ಘಟನೆ ಕಾವೂರಿನಲ್ಲಿ ನಡೆದಿದ್ದು ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜುಲೈ 20ರ ರಾತ್ರಿ 11:20ರ ಸುಮಾರಿಗೆ ಕಾವೂರಿನ ಪೆಟ್ರೋಲ್ ಬಂಕಿನಲ್ಲಿ ನೀಲಿ ಬಣ್ಣದ ರೆನಾಲ್ಟ್ ಕಾರಿಗೆ ಫುಲ್ ಟ್ಯಾಂಕ್ ಪೆಟ್ರೋಲ್ ತುಂಬಿಸಲಾಗಿದೆ. ಇದರ ಮೊತ್ತ ಸುಮಾರು 4,100 ರಷ್ಟು ಆಗಿದ್ದು, ಕಾಲು ಚಾಲಕ ಹಣ ಪಾವತಿಸದೆ ಕಾವೂರು ಜಂಕ್ಷನ್ ಕಡೆಗೆ ಕಾರಿನೊಂದಿಗೆ ಪರಾರಿಯಾಗಿದ್ದಾನೆ.
ಪೆಟ್ರೋಲ್ ಬಂಕ್ ಸಿಬ್ಬಂದಿ ಓಡಿ ಕಾರನ್ನು ಬೆನ್ನಟ್ಟಿದರೂ ಪ್ರಯೋಜನವಾಗಿಲ್ಲ. ಈ ಕುರಿತು ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಾರಿನ ಮುಂಭಾಗ ಮತ್ತು ಹಿಂಭಾಗದಲ್ಲಿ ನಂಬರ್ ಪ್ಲೇಟ್ ಇರಲಿಲ್ಲ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here