ನವಿಲು (Pavo cristatus)
ಮಕ್ಕಳಿಗಾಗಿ ವಿಶೇಷ ಮಾಹಿತಿ
ನವಿಲು ನಮ್ಮ ದೇಶದ ರಾಷ್ಟ್ರ ಪಕ್ಷಿ. ಮೂಲತಃ ದಕ್ಷಿಣ ಏಷಿಯಾದ ಪಕ್ಷಿಯಾದರೂ ಪ್ರಪಂಚದಾದ್ಯಂತ ಹಲವೆಡೆ ಕಾಣಸಿಗುತ್ತದೆ. ಭಾರತದಲ್ಲಿ ಕಂಡು ಬರುವಂತಹ ನವಿಲುಗಳು ತಮ್ಮ ವರ್ಣಮಯ ಗರಿಗಳಿಗೆ ಪ್ರತ್ಯೇಕವಾಗಿದೆ. ಗಂಡು ಹೆಣ್ಣಿಗಿಂತ ಅತೀ ಆಕರ್ಷಣೀಯವಾಗಿದೆ.
ಗಂಡು ನವಿಲುಗಳು 4-6 ಕೆ.ಜಿ ತೂಕವಿದ್ದು ಸುಮಾರು 80-90 ಇಂಚುಗಳಷ್ಟು ಉದ್ದವಿರುವುದು. ಹೆಣ್ಣು ನವಿಲುಗಳು ಗಾತ್ರದಲ್ಲಿ ಸಲ್ಪ ಚಿಕ್ಕದಾಗಿದ್ದು 3-4 ಕೆ.ಜಿ ತೂಕ ಹಾಗೂ 38 ಅಂಗುಲಗಳಷ್ಟು ಉದ್ದವಿರುವುದು. ನವಿಲುಗಳ ಕತ್ತಿನ ಬಣ್ಣ ಅತಿ ಮುಖ್ಯ ಸೂಚಕವಾಗಿದ್ದು ಆ ಉದ್ದ ಕತ್ತಿನ ಕೆಳಭಾಗವು ನೀಲಿಯಾದಲ್ಲಿ ಅದು ಗಂಡು, ಹಸಿರು ಬಣ್ಣವಾದರೆ ಅದು ಹೆಣ್ಣು ಎಂದು ಪ್ರತ್ಯೇಕಿಸಬಹುದು.
ಹೆಣ್ಣು ನವಿಲಿನ ಶರೀರದ ಮೇಲ್ಭಾಗವು ಹಸಿರು, ತಿಳಿಕಂದು ಹಾಗೂ ತಾಮ್ರ ವರ್ಣಗಳ ಮಿಶ್ರಣದಿಂದ ಮಿನುಗುವುದು. ಶರೀರದ ಕೆಳಭಾಗವು ಕಡು ಕಂದು. ಬಣ್ಣದಿಂದ ತುಂಬಿರುವುದು. ಗಂಡು ನವಿಲಿನ ಉದರ ಹಾಗೂ ಬಾಲದ ಭಾಗದ ರೆಕ್ಕೆಗಳು ಕಪ್ಪುಬಣ್ಣದಿಂದ ಕೂಡಿದ್ದು ಉದ್ದ ಗರಿಗಳನ್ನು ಹೊದ್ದಿರುವುದು. ಅದರ ಮೇಲೆ ಸುಮಾರು 200ಕ್ಕೂ ಹೆಚ್ಚು ಹಸಿರು, ನೀಲಿ, ನೇರಳೆ, ಕಪ್ಪು, ತಾಮ್ರ ವರ್ಣಗಳ ಮಿಶ್ರಿತವಾದಂತಹ ಬಾಲವು ಕೇವಲ 20 ಗರಿಗಳನ್ನು ಮಾತ್ರ ಹೊಂದಿರುವುದು.
ನವಿಲುಗಳ ತಲೆಯ ಮೇಲೆ ಬೀಸಣಿಗೆ ಆಕಾರದ ಕಿರೀಟ ಕುಂಚ ಕಪ್ಪು ಹಾಗೂ ನೀಲಿ ಬಣ್ಣದಿಂದ ಮಿನುಗುತ್ತಿರುತ್ತದೆ. ಹೆಣ್ಣು ನವಿಲುಗಳಿಗೆ ಬಾಲ ಉದ್ದವಾಗಿರುವುದಿಲ್ಲ. ಗಂಡು ನವಿಲಿಗೆ ಮಾತ್ರ ಉದ್ದ ಬಾಲವಿರುತ್ತದೆ. ಹೆಚ್ಚಾಗಿ ನವಿಲುಗಳು ಹಿಂಡಿನಲ್ಲಿ ಚಿಕ್ಕ ಚಿಕ್ಕ ಗುಂಪುಗಳಲ್ಲಿ ನೆಲದ ಮೇಲೆ ಅಲೆದಾಡುವುದು. ಅನಿವಾರ್ಯ ಪರಿಸ್ಥಿತಿಗಳಲ್ಲಿ ಹಾರುತ್ತದೆ. ಹೆಚ್ಚಾಗಿ ಹಣ್ಣುಗಳನ್ನು (ಚಿಕ್ಕ ಚಿಕ್ಕ) ಧಾನ್ಯಗಳನ್ನು ತಿನ್ನುತ್ತದೆ, ಅದರೊಂದಿಗೆ ಸಣ್ಣಪುಟ್ಟ ಹುಳು, ಹುಪ್ಪಟೆಗಳು, ಹಲ್ಲಿಗಳು, ಇಲಿ, ಹೆಗ್ಗಣಗಳು ಹಾಗೂ ಹಾವುಗಳನ್ನು ಬೇಟೆಯಾಡಿ ತಿನ್ನುತ್ತದೆ.