ಮತ್ತೆ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಯಮುನಾ ನದಿ

ಮಂಗಳೂರು(ನವದೆಹಲಿ): ದೆಹಲಿಯ ಯಮುನಾ ನದಿಯ ನೀರಿನ ಮಟ್ಟವು ಇಂದು (ಜು.23) ಮತ್ತೊಮ್ಮೆ ಅಪಾಯದ ಮಟ್ಟವನ್ನು ಮೀರಿದೆ. ಇದರಿಂದಾಗಿ ಪ್ರವಾಹ ಪೀಡಿತ ತಗ್ಗು ಪ್ರದೇಶಗಳಲ್ಲಿ ಕೈಗೊಂಡಿರುವ ಪುನರ್ವಸತಿ ಕಾರ್ಯಾಚರಣೆ ವಿಳಂಬವಾಗಿದೆ.

ಇಂದು ಸಂಜೆ 4 ಗಂಟೆ ವೇಳೆಗೆ ಯುಮುನಾ ನದಿ ನೀರಿನ ಮಟ್ಟವು 206.31 ಮೀಟರ್‌ ರಷ್ಟಿದೆ ಎಂದು ಕೇಂದ್ರ ಜಲ ಮಂಡಳಿ ತಿಳಿಸಿದೆ. ದೆಹಲಿಯಲ್ಲಿ ಕಳೆದ ಕೆಲ ದಿನಗಳಿಂದ ಅಪಾಯ ಮಟ್ಟದಲ್ಲಿದ್ದ ಯಮುನಾ ನದಿ ನೀರಿನ ಹರಿವು ಶನಿವಾರ ಬೆಳಿಗ್ಗೆ ತುಸು ತಗ್ಗಿತ್ತು. ಆದರೆ, ಉತ್ತರಾಖಂಡದಲ್ಲಿ ಭಾರಿ ಮಳೆ ಸುರಿಯುತ್ತಿರುವ ಕಾರಣ ನದಿ ನೀರಿನ ಮಟ್ಟದಲ್ಲಿ ಮತ್ತೆ ಏರಿಕೆಯಾಗಿದೆ. ಜುಲೈ 25ರವರೆಗೆ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here