ಘೇಂಡಾಮೃಗ (Rhinoceros unicornis)
ಮಕ್ಕಳಿಗಾಗಿ ವಿಶೇಷ ಮಾಹಿತಿ
ಒಂದು ಕೊಂಬನ್ನು ಹೊಂದಿರುವ ಏಷಿಯಾ ಪ್ರಾಂತ್ಯದ ಈ ಘೇಂಡಾಮೃಗ ರೈನೋಸೆರೊಟಿಡೇ ಕುಟುಂಬ ವರ್ಗಕ್ಕೆ (ಪ್ರಭೇದ) ಒಳಪಡುತ್ತದೆ, ವಿನಾಶದ ಅಂಚಿನಲ್ಲಿರುವ (ಅವಸಾನದ ಸ್ಥಿತಿಯಲ್ಲಿದೆ).ರಕ್ಷಣೆ ತೋರಬೇಕಾದ ಪ್ರಾಣಿಗಳಲ್ಲಿ ಇದೂ ಒಂದಾಗಿದೆ.
ಭಾರತದಲ್ಲಿ ಹೆಚ್ಚು ಸಂದಣಿಯಿರುವ ಜಾಗ ಅಸ್ಸಾಂ ರಾಜ್ಯ. ಈ ಅಸ್ಸಾಂ ರಾಜ್ಯದಲ್ಲಿ ಸುಮಾರು 2,000 ಘೇಂಡಾಮೃಗಗಳು ಇವೆ. (ಕುಟುಂಬ-ರೈನೋಸೆರೋಟಿಡೇ). ನದಿ ತೀರ ಪ್ರದೇಶಗಳು ವಿಶಾಲವಾದಂಥ ಹುಲ್ಲುಗಾಡಿನ ಸಮತಟ್ಟು ಪ್ರದೇಶಗಳಲ್ಲಿ ಬೀಡುಬಿಟ್ಟಿರುತ್ತದೆ. ಇಂದಿಗೂ ಉತ್ತರ ಭಾರತದ ಗಂಗಾ ನದಿ ತೀರ ಪ್ರದೇಶದುದ್ದಕ್ಕೂ, ಬ್ರಹ್ಮಪುತ್ರ ನದಿ ತೀರ ಪ್ರದೇಶದ ಹುಲುಗಾಡಿನುದ್ದಕ್ಕೂ, ಉತ್ತರ ಪ್ರದೇಶ, ಬಿಹಾರ, ಉತ್ತರ ಬಂಗಾಳದಲ್ಲಿನ ಕಣಿವೆ ಪ್ರದೇಶಗಲ್ಲಿ ಈ ಪ್ರಾಣಿ ಹೇರಳವಾಗಿ ಕಂಡುಬರುತ್ತದೆ.
ಈಶಾನ್ಯ ಭಾರತದ ಕಣಿವೆ ಪ್ರದೇಶಗಳಲ್ಲಿ, ಬೆಟ್ಟ ಗುಡ್ಡಗಳ ಹುಲ್ಲು ತಪ್ಪಲಿನ ಪ್ರದೇಶದಲ್ಲಿ (ಹಿಮಾಚಲ ಪ್ರದೇಶ) ಕಂಡುಬರುವ ಈ ಮೃಗ ಸರಿಸುಮರು 1,600 ರಿಂದ 3,500 ಕೆ.ಜಿ ತೂಕ ಹೊಂದಿದ್ದು. ಭೂಮಿಯ ಮೇಲೆ ಓಡಾಡುವ ಪ್ರಾಣಿಗಳಲ್ಲಿ ನಾಲ್ಕನೇ ಅತೀ ದೊಡ್ಡ ಪ್ರಾಣಿ.
ಗಂಡು: 12.5 ಅಡಿ ಉತ್ತರವಾದರೂ ಇರುತ್ತದೆ. (4,700 ಕೆ.ಜಿ ತೂಕ). ಹೆಣ್ಣು: 11.5 ಅಡಿ ಉದ್ದ ಇರುತ್ತದ.(1,600 ಕೆ.ಜಿ ತೂಕ). ಗಂಡು ಹೆಣ್ಣಗಳೆರಡರಲ್ಲೂ ಕೊಂಬು ಕಂಡುಬರುತ್ತದೆ, ಆದರೆ ಮರಿಗಳಲ್ಲಿ ಕೊಂಬು ಇರುವುದಿಲ್ಲ. ಆಶ್ಚರ್ಯವೆಂದರೆ ಕೊಂಬು ಸಂಪೂರ್ಣ ಕೆರಟಿನ್ ಎಂಬ ಪ್ರೋಟಿನಿಂದ ಮಾಡಲಾಗಿದ್ದು ಅದು ಕೊಂಬಲ್ಲದೆ ಘೇಂಡಾಮೃಗದ ಒಂದು ಕೂದಲು ಆಗಿದೆ. ಈ ಕೊಂಬು ವಯಸ್ಕ ಪ್ರಾಣಿಯಲ್ಲಿ 9.8 ಇಂಚಿನಿಂದ ಹಿಡಿದು 57.2 ಸೆಂ.ಮೀ ಅಂದರೆ 22.5 ಇಂಚಿನಷ್ಟು ಉದ್ದವಿರುತ್ತೆ.
ಭಾರತದಲ್ಲಿ ಕಂಡುಬರುವ ಘೇಂಡಾಮೃಗ ಕಂದು ಹಾಗೂ ಬೆಳ್ಳಿ (ಬೂದು) ಮಿಶ್ರಿತ ಬಣ್ಣ ಹೊಂದಿದ್ದು ದಪ್ಪ ಚರ್ಮವನ್ನು ಹೊಂದಿದೆ. ವಾತಾವರಣದ ಬದಲಾವಣೆಗಳು, ನೈಸರ್ಗಿಕ ವಾಸಸ್ಥಳದ ನಾಶ, ಹುಲ್ಲುಕಾಡುಗಳು, ಹವಾಮಾನದ ವೈಪರೀತ್ಯಗಳಿಂದ ಇಂದು ಈ ಅಪರೂಪದ ಬೃಹದಾಕಾರದ ಪ್ರಾಣಿ ವಿನಾಶದಂಚಿನಲ್ಲಿದೆ.