ಮಹಾರಾಷ್ಟ್ರದ ಕಾಗಲ್‌ ತಾಲೂಕಿನ 10 ಹಳ್ಳಿಗಳಲ್ಲಿ ಕರ್ನಾಟಕಕ್ಕೆ ಸೇರುವ ಠರಾವ್‌ ಪಾಸ್

ಮಂಗಳೂರು(ಬೆಳಗಾವಿ): ಬೆಳಗಾವಿ ಜಿಲ್ಲೆಯ ಮಹಾರಾಷ್ಟ್ರದ ಗಡಿಯಲ್ಲಿರುವ ಗ್ರಾಮ ಪಂಚಾಯಿತಿಗಳಲ್ಲಿ ಈ ಮೊದಲು ಮರಾಠಿಗರು ನಮ್ಮ ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿ ಎಂದು ನಿರ್ಣಯ ಕೈಗೊಳ್ಳುವ ವಾಡಿಕೆ ಇತ್ತು ಆದ್ರೆ ನಿನ್ನೆಯ ದಿನ ಮಹಾರಾಷ್ಟ್ರದ ಕೊಲ್ಹಾಪೂರ ಜಿಲ್ಲೆಯ ಕಾಗಲ್ ತಾಲ್ಲೂಕಿನ ಹತ್ತು ಗ್ರಾಮ ಪಂಚಾಯ್ತಿಗಳಲ್ಲಿ ಮಹಾರಾಷ್ಟ್ರದ ಹತ್ತು ಹಳ್ಳಿಗಳನ್ನು ಕರ್ನಾಟಕಕ್ಕೆ ಸೇರಿಸಿ ಎಂದು ಠರಾವ್ ಪಾಸ್ ಮಾಡುವ ಮೂಲಕ ಮಹಾರಾಷ್ಟ್ರ ಗಡಿಯ ಮರಾಠಿ ಭಾಷಿಕರು ಮಹಾರಾಷ್ಟ್ರ ಸರ್ಕಾರಕ್ಕೆ ಶಾಕ್‌ ನೀಡಿದ್ದಾರೆ.‌

ಮಹಾರಾಷ್ಟ್ರದ ಕಾಗಲ್ ತಾಲ್ಲೂಕಿನ ಹತ್ತು ಗ್ರಾಮ ಪಂಚಾಯ್ತಿಗಳಲ್ಲಿ ಕರ್ನಾಟಕಕ್ಕೆ ಸೇರುವ ಠರಾವ್ ಪಾಸ್ ಆಗಿರುವದರಿಂದ ಮಹಾರಾಷ್ಟ್ರ ಸರ್ಕಾರಕ್ಕೆ ತೀವ್ರ ಮುಜುಗರವಾಗಿದೆ. ಮರಾಠಿ ಭಾಷಿಕರಿಂದಲೇ ಈ ರೀತಿಯ ನಿರ್ಣಯ ಹೊರಬಿದ್ದ ಕಾರಣ ಮಹಾರಾಷ್ಟ್ರ ಸರ್ಕಾರಕ್ಕೆ ಬೆಳಗಾವಿ ಗಡಿ ವಿಚಾರದಲ್ಲಿ ಹಿನ್ನಡೆಯಾಗಿದೆ.

90ರಷ್ಟು ಮಾರಾಠಿ ಭಾಷಿಕರಿರುವ ಜನರಿಂದ ಕರ್ನಾಟಕಕ್ಕೆ ಸೇರುವ ಬಗ್ಗೆ ಠರಾವು ಪಾಸ್ ಆಗಿರುವ ವಿಚಾರ ಮಹಾರಾಷ್ಟ್ರದಲ್ಲಿ ತೀವ್ರ ಚರ್ಚೆಗೆ ಗುರಿಯಾಗಿದೆ. ಈ ಹಿಂದೆಯೂ ಜತ್ತ ತಾಲೂಕಿನ 42 ಹಳ್ಳಿಗಳೂ ಕರ್ನಾಟಕಕ್ಕೆ ಸೇರುವ ಇಂಗಿತ ವ್ಯಕ್ತ ಪಡಿಸಿ, ಸೂಕ್ತ ಮೂಲಭೂತ ಸೌಕರ್ಯ ಒದಗಿಸುವಲ್ಲಿ ವಿಫಲವಾಗಿದ್ದ ಮಹಾ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಈ ವೇಳೆ ಗಡಿಯಲ್ಲಿರುವ ಹಳ್ಳಿಗಳ ಅಭಿವೃದ್ಧಿಗಾಗಿ 1900 ಕೋಟಿ ರೂಪಾಯಿ ಅಭಿವೃದ್ಧಿ ಪ್ಯಾಕೇಜ್ ಕೊಡುವುದಾಗಿ ಮಹಾರಾಷ್ಟ್ರದ ಸಿಎಂ ಏಕನಾಥ ಶಿಂಧೆ ಭರವಸೆ ನೀಡಿದ್ದರು.

ಇದೀಗ ಮಹಾರಾಷ್ಟ್ರ ನಾಯಕರಿಗೆ ಕಾಗಲ್ ಪಂಚಾಯತಿ ಠರಾವು ನಿರ್ಧಾರ ತೆಲೆನೋವಾಗಿ ಪರಿಣಮಿಸಿದೆ. ಕರ್ನಾಟಕದೊಂದಿಗೆ ವಿಲೀನಕ್ಕೆ ಸರ್ವಾನುಮತದ ನಿರ್ಣಯ ಕೈಗೊಂಡ ಪಂಚಾಯತಿಗಳು ದೂಧ್ ಗಂಗಾ ನದಿಯಿಂದ ಇಂಚಲಕರಂಜಿಗೆ ನೀರು ಸರಬರಾಜು ಮಾಡ್ತಿರೋ ಮಹಾ ಸರ್ಕಾರದ ನಿರ್ಧಾರಕ್ಕೆ ಕಾಗಲ್ ತಾಲ್ಲೂಕಿನ ಜನ ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಯಾವುದೇ ಆಶ್ವಾಸನೆಗೂ ಒಳಗಾಗಲ್ಲ ಎಂದ ಮುಖಂಡರು ಆಕ್ರೋಶ ಹೊರಹಾಕಿದ್ದು ತುಂಬಿದ ಸಭೆಯಲ್ಲಿ ಕೈ ಮೇಲಕ್ಕೆತ್ತಿ ಕರ್ನಾಟಕಕ್ಕೆ ಸೇರುವ ನಿರ್ಧಾರ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here