ಸಾಂಬಾರ್(Rus unicolor)
ಮಕ್ಕಳಿಗಾಗಿ ವಿಶೇಷ ಮಾಹಿತಿ
ದಕ್ಷಿಣ ಏಷಿಯಾದಲ್ಲಿ ಕಂಡುಬರುವ ದೊಡ್ಡ ತಿರುಚಾದ ಗಟ್ಟಿ ಕೊಂಬುಗಳನ್ನು ಗಂಡು ಜಿಂಕೆಗಳಲ್ಲಿ ಕಾಣಬಹುದು (ಸುಮಾರು 43 ಇಂಚು ಉದ್ದ ಇರುತ್ತದೆ)
ಗಂಡು ಜಿಂಕೆ ಹೆಣ್ಣಿಗಿಂತ ಗಾತ್ರದಲ್ಲಿ ದೊಡ್ಡದು. ಜಿಂಕೆಗಳು ಒಟ್ಟಿಗೆ ಸಂತತಿಯೊಂದಿಗೆ ದಪ್ಪ ದಟ್ಟ ಪೊದೆಗಳಲ್ಲಿ, ಹುಲ್ಲುಗಾಡುಗಳಲ್ಲಿ, ದಟ್ಟ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತವೆ. ಮರಗಿಡಗಳು, ಸಸ್ಯರಾಶಿಗಳು, ಔಷಧಿ ಸಸ್ಯಗಳು, ಹಣ್ಣುಗಳು ನೀರಿನಂಶ ಹೇರಳವಾಗಿರುವ ಹಸಿರಾದ ಗಿಡಗಳನ್ನು ಸೇವಿಸುತ್ತದೆ.
ಸಾಮಾನ್ಯವಾಗಿ ಕಾಡುಮೇಡಿನ ಮಧ್ಯದಲ್ಲಿ ಕಾಣಬಹುದು. ಇವುಗಳು ನೀರು ಅಥವಾ ನದಿ ತೀರದ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುವುದಿಲ್ಲ. ನೀರು ಕುಡಿಯಲು ಬರುವ ವನ್ಯ ಮೃಗಗಳು, ಜಿಂಕೆಗಳನ್ನು ಬೇಟೆಯಾಡುವ ಸಾಧ್ಯತೆ ಇರುವುದರಿಂದ ನೀರಿನ ಬಳಿ ಇವುಗಳು ಸುಳಿದಾಡುವುದಿಲ್ಲ.
ಈ ಕಡವೆಗಳು ಬರ್ಮ, ಥಾಯಲ್ಯಾಂಡ್, ಭಾರತ, ಚೀನಾದ ಸೀಮೆ, ಇಂಡೋನೇಷಿಯಾ, ತೈವಾನ್ ಮುಂತಾದ ಕಡೆ ಕಂಡುಬರುತ್ತವೆ. ಜಿಂಕೆಗಳು ಸುಮಾರು 40-63 ಇಂಚು ಉದ್ದ ಹಾಗೂ 546 ಕೆಜಿಯವರೆಗೂ ತೂಕ ಹೊಂದಿರುತ್ತದೆ.
ಹಳದಿ ಕಂದು ಹಾಗೂ ಬೂದು ವರ್ಣಮಿಶ್ರಿತವಾದಂತಹ ದಪ್ಪ ತುಪ್ಪಟವನ್ನು ಹೊಂದಿರುತ್ತದೆ, ಕೆಲವು ಪ್ರಬೇಧಗಳು ಚಂದನ ವರ್ಣದ ಚುಕ್ಕೆಗಳನ್ನು ತುಪ್ಪಟದ ಮೇಲೆ ಹೊಂದಿರುತ್ತದೆ.
ಗಂಡು ಜಿಂಕೆ, ಬಸಿರು ಜಿಂಕೆ ಹಾಗೂ ಹಾಲುಣಿಸುವ ಜಿಂಕೆಯ ಗಂಟಲಿನ ಕೆಳ ಭಾಗದಲ್ಲಿ ಒಂದು ರಕ್ತ ವರ್ಣದ ಕೆಂಪು ಚುಕ್ಕೆ ಕಂಡು ಬರುತ್ತದೆ, ಇದರಿಂದ ಒಮ್ಮೊಮ್ಮೆ ಬಿಳಿ ದ್ರಾವಕ ಅಲ್ಲಿರುವ ಗ್ರಂಥಿಯಿಂದ ಹೊರಹೊಮ್ಮುತ್ತದೆ.