ಬೆಂಗಳೂರಿನಲ್ಲಿ ಶಂಕಿತ ಉಗ್ರರಿಗೆ ಗನ್‌ ಸಪ್ಲೈ ಮಾಡಿದಾತನ ಜಾಡು ಪತ್ತೆ

ಮಂಗಳೂರು(ಬೆಂಗಳೂರು): ನಗರದಲ್ಲಿ ಶಂಕಿತ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಿಸಿಂತೆ ಸಿಸಿಬಿ ಅಧಿಕಾರಿಗಳು ಶಂಕಿತರಿಗೆ ಗನ್ ಸಪ್ಲೈ ಮಾಡಿದಾತನ ಜಾಡನ್ನು ಪತ್ತೆ ಮಾಡಿದ್ದಾರೆ.

ಜೂನ್‌ ನಲ್ಲಿ ತುಮಕೂರು ರಸ್ತೆಯ ಟಿ. ಬೇಗೂರಿನಲ್ಲಿ ಗನ್ ಇದ್ದ ಬ್ಯಾಗ್ ಅನ್ನು ಶಂಕಿತ ಉಗ್ರ ರಬ್ಬಾನಿ ಪಡೆದಿದ್ದ. ಜೈಲಲ್ಲಿ ಪರಿಚಯವಾಗಿದ್ದ ಪೋಕ್ಸೋ ಕೇಸಿನ ಆರೋಪಿ ಬ್ಯಾಗ್ ತರುತ್ತಾನೆ ಎಂದು ಜುನೈದ್ ಹೇಳಿದ್ದ. ಅದರಂತೆ ಆತ ಹೇಳಿದ ವ್ಯಕ್ತಿಯಿಂದ ರಬ್ಬಾನಿ ಗನ್ ಇದ್ದ ಬ್ಯಾಗ್ ಪಡೆದಿದ್ದ. ಈ ಬ್ಯಾಗ್ ಅನ್ನು ರಬ್ಬಾನಿ ತಬ್ರೇಜ್‌ಗೆ ನೀಡಿದ್ದ.

ಇದೀಗ ಗನ್ ಇರುವ ಬ್ಯಾಗ್ ತಂದು ಕೊಟ್ಟಾತ ಕೂಡಾ ಆರ್‌ಟಿ ನಗರ ಹೆಬ್ಬಾಳ ಕಡೆಯವನು ಎನ್ನುವ ಶಂಕೆ ವ್ಯಕ್ತವಾಗಿದೆ. ಹೆಬ್ಬಾಳದ ಬಳಿ ಆಸ್ಪತ್ರೆಯೊಂದರಲ್ಲಿ ಗನ್ ತಂದುಕೊಟ್ಟವನ ಚಹರೆ ಪತ್ತೆಯಾಗಿದೆ. ಕಪ್ಪು ಬಣ್ಣದ ಕಾರಿನಲ್ಲಿ ಗನ್ ತಂದು ಕೊಟ್ಟಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಸಿಸಿಬಿ ಅಧಿಕಾರಿಗಳು ತುಮಕೂರು ರಸ್ತೆಯ ಸಿಸಿಟಿವಿ ಹಾಗೂ ಹೆಬ್ಬಾಳ ಸಿಸಿಟಿವಿಯ ದೃಶ್ಯಗಳನ್ನು ಹೋಲಿಕೆ ಮಾಡಿ ನೋಡುತ್ತಿದ್ದಾರೆ. ಗನ್ ತಂದುಕೊಟ್ಟಾತ ಕೈಗೆ ಸಿಕ್ಕರೆ ಪೂರ್ಣ ಮಾಹಿತಿ ಹೊರಬರಲಿದೆ.

LEAVE A REPLY

Please enter your comment!
Please enter your name here