ಪ್ರಾಣಿ ಪ್ರಪಂಚ-42

ಗಂಗಾನದಿಯ ಕಡಲಮೀನು(Glyphis gangeticus)

ಮಕ್ಕಳಿಗಾಗಿ ವಿಶೇಷ ಮಾಹಿತಿ

ಈ ಅಪರೂಪದ ಕಡಲ ಮೀನು ಭಾರತದ ಗಂಗಾ ನದಿಯಲ್ಲಿ ಕಾಣಸಿಗುವುದು. ನೋಡಲು ಬೂದು ಅಥವಾ ಕಂದು ಬಣ್ಣದಾಗಿದ್ದು ದೇಹದ ಮೇಲೆ ಯಾವುದೇ ರೀತಿಯ ಗುರುತುಗಳು ಇರುವುದಿಲ್ಲ. ಗಂಗಾಳ ಪ್ರಾಂತ್ಯದಲ್ಲಿ ಈ ಮೀನನ್ನು ಬಾಗ್‌ ಮಚ್ಚಿ ( ಅಥವಾ ಹುಲಿ ಮೀನು) ಎಂದೂ ಕರೆಯುತ್ತಾರೆ.

ಹೆಚ್ಚಾಗಿ ಈ ಪ್ರಭೇದದ ಕಡಲ ಮೀನುಗಳು ಭಾರತದ ಉತ್ತರ ಹಾಗೂ (ಈಶಾನ್ಯ) ದಿಕ್ಕಿನಲ್ಲಿ ಹರಿಯುವ ನದಿಗಳಾದ ಗಂಗಾ, ಬ್ರಹ್ಮಪುತ್ರ, ಹೂಗ್ಲಿ ನದಿ, ಬಿಹಾರದ ಮಹಾನದಿ ಹಾಗೂ ಅಸ್ಸಾಂ, ಓರಿಸ್ಸಾದ ನದಿಯಲ್ಲಿ ಕಾಣಿಸಿಕೊಂಡಿದೆ. ಹುಟ್ಟುವಾಗ 24 ಇಂಚುಗಳು ಉದ್ದವಿದ್ದು ಬೆಳೆದು 2 ಮೀಟರ್‌ ಅಂದರೆ 6.6 ಅಡಿ ಉದ್ದವಾಗುವುದು. ಇದರ ಆಹಾರ ಪದ್ಧತಿಯು ಹೆಚ್ಚಾಗಿ ತಿಳಿದುಬಂದಿಲ್ಲವಾದರೂ ನದಿಗಳಲಿ ಮಧ್ಯ ಹಾಗೂ ಕೆಳಭಾಗದಲ್ಲಿ, ನದಿಗಳು ಸಂಗಮವಾಗುವ ಜಾಗಗಳಲಿ ಸಮುದ್ರದ ತೀರ ಪ್ರದೇಶಗಳಲ್ಲಿ ಕಂಡುಬರುತ್ತದೆ.

ಚಿಕ್ಕ ಕಣ್ಣುಗಳನ್ನು ಹೊಂದಿರುತ್ತದೆ, ಗುಂಡನೆಯ ಅಗಲ ಸುಂಡಿಯನ್ನು ಹೊಂದಿರುತ್ತದೆ. ಅಗಲವಾದ 2 ಈಜು ರೆಕ್ಕೆಗಳು, 2 ಹಿಂಬದಿಯ ರೆಕ್ಕೆಗಳು ಹಾಗೂ ಒಂದು ಬಾಲದ ರೆಕ್ಕೆಯನ್ನು ಹೊಂದಿರುತ್ತದೆ. ನಾಹರೀಕತೆಯು ಬೆಳೆದಂತೆಲ್ಲಾ ಆಹಾರಕ್ಕಾಗಿ ಮೀನುಗಾರಿಕೆಯನ್ನು ಅವಲಂಬಿಸಿರುವ ಬೆಸ್ತರು ಹೆಚ್ಚಾಗಿ ನದಿ ಹಾಗೂ ಸಮುದ್‌ರ ಪ್ರದೇಶಗಳಲಿ ಈ ಕಡಲ ಮೀನನ್ನು ಹಿಡಿದು ಈಅಗ ಇದು ವಿನಾಶದ ಅಂಚಿನಲ್ಲಿದೆ. ಆಹಾರ ರೂಪದಲ್ಲಿ ಬಳಸುವುದರ ಜೊತೆ ಜೊತೆಗೆ ಈ ಮೀನಿನ ಎಣ್ಣೆ ಬಹಳ ಬೆಲೆ ಬಾಳುವುದಾಗಿದೆ.

LEAVE A REPLY

Please enter your comment!
Please enter your name here