ಮಣಿಪುರ ಹಿಂಸಾಚಾರ ಖಂಡಿಸಿ ಮಂಗಳೂರಿನಲ್ಲಿ ಪ್ರೊಟೆಸ್ಟ್‌

ಮಂಗಳೂರು: ಕೆಥೋಲಿಕ್ ಸಭಾ ವತಿಯಿಂದ, ಮಣಿಪುರದಲ್ಲಿ ಸರಣಿ ಅತ್ಯಾಚಾರ, ಮಹಿಳೆಯರ ಬೆತ್ತಲೆ ಮೆರವಣಿಗೆ, ಹತ್ಯಾಕಾಂಡ ವಿಚಾರದಲ್ಲಿ ಕೇಂದ್ರ ಮತ್ತು ಮಣಿಪುರ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ನಗರದ ಟೌನ್ ಹಾಲ್ ಮುಂಭಾಗದಲ್ಲಿ ಸೇರಿದ ಎರಡು ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರು ಕೇಂದ್ರ ಸರಕಾರದ ಇಬ್ಬಗೆ ನೀತಿಯ ಬಗ್ಗೆ ಖಂಡನೆ, ಧಿಕ್ಕಾರ ಕೂಗಿದರು.

ಪ್ರತಿಭಟನೆಯಲ್ಲಿ ರಾಯ್ ಕ್ಯಾಸ್ಟಲಿನೋ,ಸಾಮಾಜಿಕ ಕಾರ್ಯಕರ್ತೆ ವಿದ್ಯಾ ದಿನಕರ್,ಉಲೇಮಾ ಹಿಂದ್ ಸಂಘಟನೆಯ ಮಹಮ್ಮದ್ ದಾರಿಮಿ, ಮಾತನಾಡಿ ಕೇಂದ್ರ ಮತ್ತು ಮಣಿಪುರ ಸರಕಾರದ ಧೋರಣೆಯನ್ನು ಖಂಡಿಸಿದರು. ಕ್ರೈಸ್ತರ ಮೇಲಿನ ದಾಳಿ ಕೇಂದ್ರ ಸರಕಾರದ ದ್ವೇಷ ರಾಜಕಾರಣದ ಭಾಗವಾಗಿದೆ, ಮೀಸಲಾತಿ ಹೆಸರಿನಲ್ಲಿ ಕ್ರೈಸ್ತರ ಮೇಲೆ ದಾಳಿ ಸಲ್ಲದು ಎಂದು ಆಕ್ರೋಶ ಹೊರಹಾಕಿದರು. ಮಣಿಪುರದ ಜನರು ನಮ್ಮವರೇ, ಅವರೊಂದಿಗೆ ನಾವಿದ್ದೇವೆ ಎಂದು ನೂರಾರು ಪ್ಲೇಕಾರ್ಡ್ ಹಿಡಿದು ಪ್ರತಿಭಟನಾಕಾರರು ಮಣಿಪುರದ ಪರವಾಗಿ ಘೋಷಣೆ ಕೂಗಿದರು. ಮಂಗಳೂರು ಧರ್ಮಪ್ರಾಂತ್ಯದ ಎಲ್ಲ ಚರ್ಚ್ ಗಳಿಂದಲೂ ಧರ್ಮಗುರು ಸಹಿತ ಭಗಿನಿಯರು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವಿಡಿಯೋಗಾಗಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here