ಪ್ರಾಣಿ ಪ್ರಪಂಚ-43

ಭಾರತದ ದೈತ್ಯ ಅಳಿಲು(Ratufa indica)

 

ಮಕ್ಕಳಿಗಾಗಿ ವಿಶೇಷ ಮಾಹಿತಿ

ಇಂಡಿಯನ್‌ ಜೇಂಟ್‌ ಅಳಿಲು ಅಥವಾ ಮಲಬಾರ್‌ ಜೇಂಟ್‌ ಅಳಿಲುಗಳು ಮರಗಳಲ್ಲಿ ವಾಸಿಸುತ್ತದೆ. ದೊಡ್ಡ ಅಳಿಲುಗಳು ರಟುಫ ಕುಲಕ್ಕೆ ಸೇರಿದ್ದು ಇದರ ವಾಸಸ್ಥಾನ ಭಾರತವಾಗಿದೆ.ಇದರ ದೇಹವು ದೊಡ್ಡದಾಗಿರುತ್ತದೆ. ಇವು ಸಸ್ಯಹಾರಿಗಳು ಹಾಗೂ ದಕ್ಷಿಣ ಏಷ್ಯಾದಲ್ಲಿ ಕಂಡುಬರುತ್ತದೆ.

ವಿವರಣೆ:
ರಟುಫ ಇಂಡಿಕ ಜಾತಿಯ ಅಳಿಲುಗಳಿಗೆ ಎರಡು ಅಥವಾ ಮೂರು ಬಣ್ಣಗಳು ಇರುತ್ತವೆ. ಅವು ಕೆನೆ ಬಣ್ಣ,ಕಂದು ಬಣ್ಣ,ಕಂದು ಬಣ್ಣ,ಕೆಲವೊಮ್ಮೆ ಗಾಢ ಕಂದು ಬಣ್ಣವು ಇರುತ್ತದೆ.ದೇಹದ ಕೆಳಗಿನ ಭಾಗವು ಮತ್ತು ಕಾಲಿನ ಮುಂಬಾಗವು ಸಾಮಾನ್ಯವಾಗಿ ಕೆನೆಯ ಬಣ್ಣವಾಗಿದ್ದು, ತಲೆಯ ಕಂದು ಬಣ್ಣವಾಗಿರುತ್ತದೆ. ಇದರ ಕಿವಿಗಳ ಮಧ್ಯೆ ಬಿಳಿಯ ಚುಕ್ಕಿಗಳಿರುತ್ತದೆ. ವಯಸ್ಕ ಅಳಿಲುಗಳ ದೇಹದ ಉದ್ದ 14 ಇಂಚುಗಳಷ್ಟು ಮತ್ತು ಬಾಲವು 2 ಅಡಿಯಷ್ಟು ಇರುತ್ತದೆ. ತೂಕವು 2ಕೆ.ಜಿಯಿರುತ್ತದೆ.

ನಡವಳಿಕೆ:
ಈ ಅಳಿಲುಗಳು ಮೇಲಿನ ಮೇಲಾವರಣದಲ್ಲಿ ವಾಸಿಸುವ ಜೀವಿಗಳು.ಅಪರೂಪಕ್ಕೆ ಮರಗಳನ್ನು ತೊರೆದು ಸಮೃದ್ಧವಾದ ಶಾಖೆಗಳನ್ನು(ರೆಂಬೆ) ಹೊಂದಿರುವ ಮರಗಳಲ್ಲಿ ಗೂಡನ್ನು ಕಟ್ಟಿಕೊಳ್ಳುತ್ತವೆ.ಇವು ಒಂದು ಮರದಿಂದ ಇನ್ನೊಂದು ಮರಕ್ಕೆ 6 ಮೀಟರ್‌ ನಷ್ಟು ದೂರ ಹಾರುತ್ತವೆ. ಅಪಾಯದ ಕ್ಷಣಗಳಲ್ಲಿ ಓಡಿ ಹೋಗುವ ಬದಲು ಇವು ಮರಗಳಲ್ಲಿ ಸ್ಥಬ್ಧವಾಗಿ ಅಥವಾ ಮರದ ರೆಂಬೆಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಅವಿತುಕೊಳ್ಳುತ್ತವೆ.ಇದನ್ನು ಮುಖ್ಯವಾಗಿ ಪಕ್ಷಿಗಳು ಹಾಗೂ ಚಿರತೆಯು ಭಕ್ಷಿಸುತ್ತದೆ. ಜೇಂಟ್‌ ಅಳಿಲುಗಳು ಬೆಳಗಿನ ಹೊತ್ತು, ಸಂಜೆಯ ಹೊತ್ತು ಕ್ರಿಯಾಶೀಲವಾಗಿದ್ದು ಮಧ್ಯಾಹ್ನದ ವೇಳೆ ವಿಶ್ರಾಂತಿ ತೆಗೆದುಕೊಳ್ಳುತ್ತವೆ. ಇವು ಸಂಕೋಚ ಸ್ವಭಾವದವು, ಅತೀ ಜಾಗರೂಕವಾಗಿರುವಂಥವು, ಇದನ್ನು ಕಂಡು ಹಿಡಿಯಲು ಬಹಳ ಕಷ್ಟ.

ಈ ಅಳಿಲುಗಳು ಕೆಲವೊಮ್ಮೆ ಒಂಟಿಯಾಗಿ ಅಥವಾ ಜೊತೆಯಾಗಿ ವಾಸಿಸುತ್ತದೆ. ಸಣ್ಣ ಮರದ ಕಡ್ಡಿಗಳಿಂದ ಹಾಗೂ ಎಲೆಗಳಿಂದ ಗೂಡನ್ನು ಕಟ್ಟಿಕೊಳ್ಳುತ್ತದೆ. ಈ ಗೂಡನ್ನು ತೆಳ್ಳಗಿರುವ ರೆಂಬೆಗಳ ಮೇಲೆ ಕಟ್ಟುತ್ತವೆ. ವೃತ್ತಾಕಾರದಲ್ಲಿ ಒಂದೇ ಅಳಿಲು ಕಾಡಿನ ಸಣ್ಣ ಸಣ್ಣ ಜಾಗಗಳಲ್ಲಿ ಗೂಡುಗಳನ್ನು ಕಟ್ಟಿಕೊಂಡು ಮಲಗಿಕೊಳ್ಳಲು ಉಪಯೋಗಿಸಿಕೊಳ್ಳುತ್ತವೆ. ಇವು ಸಾಮಾನ್ಯವಾಗಿ ಮಾರ್ಚ್‌, ಏಪ್ರಿಲ್‌, ಸೆಪ್ಟೆಂಬರ್‌ ಮತ್ತು ಡಿಸೆಂಬರ್‌ ತಿಂಗಳುಗಳಲ್ಲಿ ಮರಿ ಹಾಕುತ್ತವೆ.

LEAVE A REPLY

Please enter your comment!
Please enter your name here