ಮಂಗಳೂರು (ಬೆಂಗಳೂರು ):ಉಡುಪಿ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಸೆರೆ ಹಿಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಬಿಜೆಪಿಯ ಸಾಮಾಜಿಕ ಜಾಲತಾಣದ ಕಾರ್ಯಕರ್ತೆ ಶಕುಂತಲಾ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನವರ ಪ್ರಕಾರ ವಿಡಿಯೋ ಮಾಡಿದ್ದು, ಮಕ್ಕಳ ಆಟವಂತೆ ಸಿದ್ದರಾಮಯ್ಯ ಸೊಸೆ ಅಥವಾ ಹೆಂಡತಿ ಅವರ ವಿಡಿಯೋವನ್ನು ಇದೇ ತರಹ ಮಾಡಿದರೆ ಅದನ್ನು ಮಕ್ಕಳಾಟ ಎಂದು ಒಪ್ಪಿಕೊಳ್ಳುತ್ತೀರಾ ಎಂದು ಶಕುಂತಲಾ ಪೋಸ್ಟ್ ಮಾಡಿದ್ದರು. ಈ ಕುರಿತು ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಿಜೆಪಿಯ ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ತುಮಕೂರು ಮೂಲದ ಶಕುಂತಲಾ ಅವರನ್ನು ಬಂಧಿಸಲಾಗಿದೆ.