ನೀರಿನ ಹೊಂಡಕ್ಕೆ ಬಿದ್ದು ಮೂರು ವರ್ಷದ ಬಾಲೆ ಮೃತ್ಯು

ಮಂಗಳೂರು(ಉಡುಪಿ): ಹೆಬ್ರಿ ತಾಲೂಕಿನ ನಾಲ್ಕೂರು ಗ್ರಾಮದ ಕಕ್ಕೆ ಅರಮನೆ ಜೆಡ್ಡು ಸಮೀಪ ನೀರಿನ ಹೊಂಡಕ್ಕೆ ಬಿದ್ದು ಮೂರು ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಮೃತ ಬಾಲಕಿಯನ್ನು ಕೃತಿಕಾ(3) ಎಂದು ಗುರುತಿಸಲಾಗಿದೆ.

ಆ.1 ರ (ಮಂಗಳವಾರ) ರಾತ್ರಿ ಅಜ್ಜಿ ಮಂಜುಳಾ ಜೊತೆ ನಡೆದುಕೊಂಡು ಹೋಗುತ್ತಿದ್ದಾಗ ಕತ್ತಲಲ್ಲಿ ರಸ್ತೆ ಪಕ್ಕದಲ್ಲಿರುವ ಹೊಂಡಕ್ಕೆ ಬಾಲಕಿ ಬಿದ್ದು ಬಾಲಕಿ ಸಾವನ್ನಪ್ಪಿದ್ದಾಳೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here