ಮೊಬೈಲ್ ಚಾರ್ಜರ್ ನಿಂದ ವಿದ್ಯುತ್ ಶಾಕ್ – 8 ತಿಂಗಳ ಮಗುವಿನ ದಾರುಣ ಸಾವು

ಮಂಗಳೂರು: ಮೊಬೈಲ್ ಚಾರ್ಜರ್ ‌ಬಾಯಿಯಲ್ಲಿ ಹಾಕಿ 8 ತಿಂಗಳ ಮಗು ಮೃತಪಟ್ಟ ಘಟನೆ ಬುಧವಾರ ತಾಲೂಕಿನ ಸಿದ್ದರದಲ್ಲಿ ನಡೆದಿದೆ.

ಮೊಬೈಲ್‌ ಚಾರ್ಜ್‌ ಗೆ ಹಾಕಿ ತೆಗೆದ ನಂತರ ಪಾಲಕರು ಸ್ವಿಚ್‌ ಆಫ್‌ ಮಾಡಲು ಮರೆತಿದ್ದರು.ಏನೂ ಅರಿಯದ ಮಗು ಚಾರ್ಜರ್‌ ಪಿನ್‌ ಬಾಯಲ್ಲಿ ಹಾಕಿದ್ದು ವಿದ್ಯುತ್ ಪ್ರವಹಿಸಿದೆ. ಇದರಿಂದ ಹೆಸ್ಕಾಂ ಗುತ್ತಿ ಆಧಾರದ ಉದ್ಯೋಗಿ ಸಂತೋಷ್‌ ಹಾಗೂ ಸಂಜನ ಅವರ 8 ತಿಂಗಳ ಹೆಣ್ಣು ಮಗು ಸಾನಿಧ್ಯ ಮೃತಪಟ್ಟಿದೆ. ತಕ್ಷಣ ಮಗುವನ್ನು ಕಿಮ್ಸ್‌ ಆಸ್ಪತ್ರೆಗೆ ತರಲಾಯಿತಾದರೂ ಮಗು ಮೃತಪಟ್ಟಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here