ಪ್ರಾಣಿ ಪ್ರಪಂಚ-49

ಭಾರತೀಯ ತೋಳ (Canis lupus pallipes)

ಮಕ್ಕಳಿಗಾಗಿ ವಿಶೇಷ ಮಾಹಿತಿ

ಈ ತೋಳವು ಬೂದು ಬಣ್ಣದ ಜಾತಿಯದು. ಮಧ್ಯ ಪೂರ್ವ ದೇಶಗಳಲ್ಲಿ, ದಕ್ಷಿಣ ಏಶಿಯಾದಲ್ಲಿ ಈ ತೋಳಗಳು ಕಂಡುಬರುತ್ತವೆ. ನಾಯಿ ಜಾತಿಗೆ ಸೇರಿದ ಇದು ಸಾಮಾನ್ಯವಾಗಿ ಸಾಧು ಸ್ವಭಾವದ ಜೀವಿಯಾಗಿದೆ. ಆಗಾಗ ನರಭಕ್ಷಕವೆಂದೂ ಹೆಸರಿದೆ. ಭಾರತದ ತೋಳಗಳು ಯುರೋಪಿನ ತೋಳಗಳಿಗಿಂತ ಚಿಕ್ಕವು, ಇವುಗಳ ಮೈಯ ತುಪ್ಪಳವು ಇತರ ಕಡೆಗಿಂತ ತೆಳುವಾದದು, ಬೂದು ಬಣ್ಣವು ಈ ತೋಳಗಳದು. ಹೆಗಲ ಮೇಲೆ ಇಂಗ್ಲೀಷ್‌ ʼವಿʼ ಆಕಾರದ ಪಟ್ಟೆಗಳಿವೆ. ದೇಹದ ಕೆಳಭಾಗ ಹಾಗೂ ಕಾಲುಗಳು ಬಿಳಿಯ ಬಣ್ಣದವು. ಭಾರತೀಯ ತೋಳಗಳಲ್ಲಿ ತುಪ್ಪಳವು ಬೇಸಿಗೆಯಲ್ಲಿ ಚಿಕ್ಕದು ಹಾಗೂ ತೆಳು ಆಗುತ್ತದೆ. ಚಳಿಗಾಲದಲ್ಲಿ ಅದು ಉದ್ದ ಹಾಗೂ ದಟ್ಟವಾಗುತ್ತದೆ, ಹಿಮಾಲಯದ ದಕ್ಷಿಣ, ಇಸ್ರೇಲ್‌, ಈಜಿಫ್ಟ್ ಗಳಲ್ಲಿ ಈ ತೋಳಗಳು ಕಂಡುಬರುತ್ತವೆ. 6 ರಿಂದ 8ರ ಗುಂಪಿನಲ್ಲಿ ಇವು ವಾಸಿಸುತ್ತವೆ. ತೋಳಗಳನ್ನು ಜೊತೆಯಾಗಿಯೇ ಬೇಟೆಯಾಡುತ್ತಾರೆ. ಭಾರತದಲ್ಲಿ ಸದ್ಯ ಅಂದಾಜು ಒಂದು ಸಾವಿರ ತೋಳಗಳಿವೆ. ಇವು ರಕ್ಷಿತ ಪ್ರಾಣಿಗಳ ಪಟ್ಟಿಗೆ ಸೇರಿವೆ. ತೋಳಗಳು ಭಾರತದಲ್ಲಿ ಹೆಚ್ಚಾಗಿ ಗುಜರಾತ್, ರಾಜಸ್ಥಾನ್‌, ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶಗಳಲ್ಲಿವೆ. ಇವು ಆಕ್ರಮಕಾರಿಯಾಗಿವೆ, ಭಾರತೀಯ ಪುರಾಣಗಳಲ್ಲಿ ತೋಳಗಳ ಉಲ್ಲೇಖವಿದೆ. ಕೃಷ್ಣನು ತೋಳದ ರೂಪದಲ್ಲಿದ್ದ ವೃಕಾಸುರನನ್ನು ಕೊಲ್ಲುತ್ತಾನೆ. ವೃಕ ಎಂದರೆ ತೋಳ, ಭೀಮನ ಹೆಸರು ವೃಕೋದರ ಅಂದರೆ ತೋಳದಂಥ ಹೊಟ್ಟೆಯವನು ಎಂದು.

LEAVE A REPLY

Please enter your comment!
Please enter your name here