ವಿದ್ಯುತ್ ಟ್ರಾನ್ಸ್ ಫಾರ್ಮರ್ ಬಳಿ ಕಾರ್ ಪಾರ್ಕ್ ಮಾಡಬೇಡಿ

ಮಂಗಳೂರು( ಬೆಂಗಳೂರು ): ಟ್ರಾನ್ಸ್ಫಾರ್ಮರ್ ಸ್ಫೋಟಗೊಂಡು ಹತ್ತಿಕೊಂಡ ಬೆಂಕಿ ಪಕ್ಕದಲ್ಲಿ ನಿಲ್ಲಿಸಿದ್ದ ಮರ್ಸಿಡಿಸ್ ಬೆಂಜ್ ಸೇರಿದಂತೆ ಎರಡು ಕಾರುಗಳಿಗೆ ಬೆಂಕಿ ತಗಲಿ ಹೊತ್ತಿ ಉರಿದ ಘಟನೆ ಬಾಣಸವಾಡಿಯ ಸ್ಪೆನ್ಸರ್ ರಸ್ತೆಯಲ್ಲಿ ನಡೆದಿದೆ.

ಘಟನೆಯ ಸಂದರ್ಭ ಕಾರಿನಲ್ಲಿ ಯಾರು ಇಲ್ಲದ ಕಾರಣ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ರಸ್ತೆಯ ಮನೆಯೊಂದಿರ ಗೇಟಿನ ಬಳಿ ಎರಡು ಕಾರು ನಿಂತಿತ್ತು. ಬೆಂಕಿ ಹೊತ್ತಿಕೊಳ್ಳುವ ಮುನ್ನ ಬೆಂಜಿನ ಚಾಲಕ ಆನ್ ರೋಡಿನಲ್ಲಿ ಕಾರು ನಿಲ್ಲಿಸಿ ಹತ್ತಿರದ ಮನೆಯಲ್ಲಿದ್ದ ತನ್ನ ಸಂಬಂಧಿಕರನ್ನು ಭೇಟಿಯಾಗಲು ಹೋಗಿದ್ದರು. ಈ ವೇಳೆ ಈ ಅವಘಡ ಸಂಭವಿಸಿದೆ.

LEAVE A REPLY

Please enter your comment!
Please enter your name here