ಇಸ್ರೋ ಪಾಲಿಗೆ ಐತಿಹಾಸಿಕ ದಿನ – ಚಂದ್ರನ ಕಕ್ಷೆ ಸೇರಲಿರುವ ಚಂದ್ರಯಾನ – 3

ಮಂಗಳೂರು ( ಬೆಂಗಳೂರು): ಶ್ರೀ ಹರಿಕೋಟಾದಿಂದ ಜುಲೈ 14ರಂದು ಉಡಾವಣೆಗೊಂಡ ಚಂದ್ರಯಾನ – 3 ಬಾಹ್ಯಾಕಾಶ ನೌಕೆಯು ಇಂದು ಚಂದ್ರನ ಕಕ್ಷೆ ಸೇರಲಿದೆ. ಚಂದ್ರಯಾನ 3 ಈಗಾಗಲೇ ತನ್ನ ಪ್ರಯಾಣದ ಮೂರನೇ ಎರಡರಷ್ಟು ದೂರವನ್ನು ಕ್ರಮಿಸಿದೆ. ಅಗಸ್ಟ್ ಒಂದರಂದು ಭೂಮಿಯ ಕಕ್ಷೆಯಿಂದ ಚಂದ್ರನತ್ತ ಸಾಗಿತ್ತು.

ಇಂದು ಸಂಜೆ ಚಂದ್ರನ ಕಕ್ಷೆಗೆ ಪ್ರವೇಶಿಸಲಿದೆ. ಈ ನೌಕೆ ಈಗಾಗಲೇ 2.6 ಲಕ್ಷ ಕಿಲೋಮೀಟರ್ ದೂರ ಕ್ರಮಿಸಿದ್ದು, ಆಗಸ್ಟ್ 23ರಂದು ನೌಕೆಯಲ್ಲಿರುವ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯುವ ನಿರೀಕ್ಷೆಯನ್ನು ಇಸ್ರೋ ಹೊಂದಿದೆ. ಲ್ಯಾಂಡರ್ ಚಂದ್ರನಲ್ಲಿ ಲ್ಯಾಂಡಿಂಗ್ ಆದರೆ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸದೊಂದು ಚರಿತ್ರೆ ನಿರ್ಮಾಣವಾಗಲಿದೆ. ಇಂತಹ ಸಾಧನೆ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರವಾಗಿ ಭಾರತ ಗುರುತಿಸಿಕೊಳ್ಳಲಿದೆ. ಚಂದ್ರನಲ್ಲಿ ಲ್ಯಾಂಡರ್ ಕಾಲಿಟ್ಟ ಮೇಲೆ ರೋವರ್ ಹೊರಬಂದು ಅಧ್ಯಯನ ನಡೆಸಲಿದೆ.

LEAVE A REPLY

Please enter your comment!
Please enter your name here