ಕೇರಳ ಇನ್ನು ಮುಂದೆ ಕೇರಳಂ-ಹೆಸರು ಬದಲಾಯಿಸುವ ನಿರ್ಣಯ ಅಂಗೀಕಾರ

ಮಂಗಳೂರು(ತಿರುವನಂತಪುರಂ): ಕೇರಳ ರಾಜ್ಯದ ಅಧಿಕೃತ ಹೆಸರನ್ನು ಕೇರಳಂ ಎಂದು ಬದಲಾಯಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವ ನಿರ್ಣಯವನ್ನು ಕೇರಳ ವಿಧಾನಸಭೆ ಅಂಗೀಕರಿಸಿದೆ. ಮುಖ್ಯಮಂತ್ರಿ ಮಂಡಿಸಿದ ನಿರ್ಣಯ ಅಂಗೀಕಾರವಾದ ನಂತರ ಸರ್ಕಾರಿ ದಾಖಲೆಗಳಲ್ಲಿ ಕೇರಳಂ ಹೆಸರು ಬಳಕೆಯಾಗುತ್ತಿದ್ದು, ಈ ಬದಲಾವಣೆಯು ಸಂವಿಧಾನದಲ್ಲಿ ಪ್ರತಿಫಲಿಸಲಿದೆ ಮತ್ತು ಅಧಿಕೃತವಾಗಿ ಮಲಯಾಳಂ ಮತ್ತು ಇಂಗ್ಲಿಷ್‌ನಲ್ಲಿಯೂ ಬರೆಯಲಾಗುತ್ತದೆ. ಈ ನಿರ್ಣಯವನನ್ನು ಸರ್ವಾನುಮತದಿಂದ ಅಂಗೀಕರಿಸಿ ಭಾರತೀಯ ಸಂವಿಧಾನದ ಎಂಟನೇ ಶೆಡ್ಯೂಲ್ ಮತ್ತು ಎಲ್ಲ ಅಧಿಕೃತ ದಾಖಲೆಗಳಲ್ಲಿ ಹೆಸರು ಬದಲಿಸಲು ಕೇರಳ ಸರ್ಕಾರ ಕೇಂದ್ರವನ್ನು ಕೋರಿದೆ.

ರಾಜ್ಯದ ಹೆಸರು ಮಲಯಾಳಂನಲ್ಲಿ ಕೇರಳಂ ಎಂದೇ ಕರೆಯಲಾಗುತ್ತಿದ್ದು, 1956ರ ನವೆಂಬರ್ 1ರಂದು ಭಾಷಾವಾರು ಆಧಾರದ ಮೇಲೆ ರಾಜ್ಯ ರಚಿಸಲಾಯಿತು. ಮಲಯಾಳಂ ಮಾತನಾಡುವ ಎಲ್ಲ ಜನರಿಗೆ ಅಖಂಡ ಕೇರಳ ರಾಜ್ಯ ರಚನೆಯಾಗಿದ್ದು, ಸಂವಿಧಾನದ ಮೊದಲ ಶೆಡ್ಯೂಲ್​ನಲ್ಲಿ ರಾಜ್ಯದ ಹೆಸರನ್ನು ಕೇರಳ ಎಂದು ನಮೂದಿಸಲಾಗಿದೆ. ರಾಜ್ಯದ ಅಧಿಕೃತ ಹೆಸರನ್ನು ಎಲ್ಲ ಅಧಿಕೃತ ಭಾಷೆಗಳಲ್ಲಿ ಕೇರಳಂ ಎಂದು ಬದಲಾಯಿಸಲು ಸಂವಿಧಾನದ ಎಂಟನೇ ಶೆಡ್ಯೂಲ್ ಅಡಿಯಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡುವಂತೆ ವಿಧಾನಸಭೆಯು ಕೇಂದ್ರ ಸರ್ಕಾರ ಸರ್ವಾನುಮತದಿಂದ ವಿನಂತಿಸುತ್ತದೆ ಎಂದು ನಿರ್ಣಯ ಮಂಡಿಸುವಾಗ ಸಿಎಂ ಪಿಣರಾಯಿ ವಿಜಯನ್​ ವಿವರಿಸಿದರು.

LEAVE A REPLY

Please enter your comment!
Please enter your name here