ಮಂಗಳೂರು: ಇತ್ತೀಚೆಗೆ ಅಂಗನವಾಡಿಗೆ ಕೊಳೆತ ಮೊಟ್ಟೆಗಳು ಪೂರೈಕೆಯಾಗುತ್ತಿರುವ ಬಗ್ಗೆ ಸುದ್ದಿಯಾಗಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಂಗನವಾಡಿಗಳಿಗೆ ಮೊಟ್ಟೆ ಪೂರೈಕೆ ಮಾಡುವ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸುವುದಾಗಿ ಹೇಳಿದ್ದರು. ಆದರೆ ಸಮಸ್ಯೆ ಪರಿಹಾರವಾದಂತಿಲ್ಲ.
ಮಂಗಳೂರಿನ ಹಲವೆಡೆ ಮತ್ತೆ ಕೊಳೆತ ಮೊಟ್ಟೆ ಪೂರೈಕೆ ಆಗುತ್ತಿರುವುದು ಕಂಡು ಬಂದಿದ್ದು, ಅಂಗನವಾಡಿಯಿಂದ ನೀಡಿರುವ ಮೊಟ್ಟೆ ಸೇವನೆ ಮಾಡಿದವರು ಅಸ್ವಸ್ಥರಾಗಿದ್ದಾರೆ. ಕಾಟಿಪಳ್ಳದ ಆಸುಪಾಸಿನಲ್ಲಿ ಅಂಗನವಾಡಿಗಳಿಗೆ ಕೊಳೆತ ಮೊಟ್ಟೆ ಪೂರೈಕೆಯಾಗಿದೆ. ಆಕಾಶಭವನದಲ್ಲಿ ಗರ್ಭಿಣಿ ಮಹಿಳೆ, ಮಗು ಮೊಟ್ಟೆ ತಿಂದು ಅಸ್ವಸ್ಥರಾಗಿದ್ದಾರೆ. ಕಳೆದ ತಿಂಗಳು ಮಂಗಳೂರಿನ ಹಲವೆಡೆ ಅಂಗನವಾಡಿಗಳಿಗೆ ಕೊಳೆತ ಮೊಟ್ಟೆ ಪೂರೈಕೆಯಾಗಿದೆ. ಈ ಬಾರಿಯೂ ಕೆಲವು ಕಡೆಗಳಿಗೆ ಕೊಳೆತ ಮೊಟ್ಟೆ ಪೂರೈಕೆ ಆಗಿರುವ ಮಾಹಿತಿ ಲಭ್ಯವಾಗಿದೆ. ಮತ್ತೆ ಅಂಗನವಾಡಿಗಳಿಗೆ ಗುತ್ತಿಗೆದಾರರು ಕೊಳೆತ ಮೊಟ್ಟೆ ಪೂರೈಸಿರುವ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.