ವೈದ್ಯರು ಔಷಧ ಹೆಸರುಗಳನ್ನು ಸ್ಪಷ್ಟವಾಗಿ ಕ್ಯಾಪಿಟಲ್ ಲೆಟರ್ ನಲ್ಲೇ ಬರೆಯಬೇಕು-ರಾಷ್ಟ್ರೀಯ ವೈದ್ಯಕೀಯ ಆಯೋಗ

ಮಂಗಳೂರು: ವೈದ್ಯರು ತಮ್ಮ ರೋಗಿಗಳಿಗೆ ಜನೆರಿಕ್ ಔಷಧವನ್ನೇ ಬರೆಯಬೇಕು, ತಪ್ಪಿದರೆ ದಂಡ ವಿಧಿಸಲಾಗುವುದು ಎಂದು ಸೂಚನೆ ನೀಡಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ, ವೈದ್ಯರು ಪ್ರಿಸ್ಕ್ರಿಪ್ಷನ್ ಸ್ಪಷ್ಟವಾಗಿ ಹಾಗೂ ಕ್ಯಾಪಿಟಲ್ ಲೆಟರ್ ನಲ್ಲೇ ಬರೆಯಬೇಕು ಎಂಬ ಸೂಚನೆಯನ್ನು ನೀಡಿದೆ.

ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ ಆ.2 ರಂದು ಹೊರಬಿದ್ದಿರುವ ‘ರೆಗ್ಯುಲೇಷನ್ಸ್ ರಿಲೇಟಿಂಗ್ ಟು ಪ್ರೊಫೆಷನಲ್ ಕಂಡಕ್ಟ್ ಆಫ್ ರಿಜಿಸ್ಟರ್ಡ್ ಮೆಡಿಕಲ್ ಪ್ರ್ಯಾಕ್ಟಿಷಿನರ್ಷ್’ ಪ್ರಕಾರ ವೈದ್ಯರು ಔಷಧದ ಹೆಸರುಗಳನ್ನು ಸ್ಪಷ್ಟವಾಗಿ ಮತ್ತು ಕ್ಯಾಪಿಟಲ್ ಲೆಟರ್ ನಲ್ಲೇ ಬರೆಯಬೇಕು. ತಪ್ಪು ತಿಳುವಳಿಕೆ ತಪ್ಪಿಸುವ ನಿಟ್ಟಿನಲ್ಲಿ ಇದು ಅಗತ್ಯವಾಗಿದ್ದು, ಸಾಧ್ಯವಾದರೆ ಪ್ರಿಸ್ಕ್ರಿಪ್ಷನ್ ಟೈಪ್ ಮಾಡಿ ಪ್ರಿಂಟ್ ರೂಪದಲ್ಲಿ ಕೊಡಬೇಕು ಎಂದೂ ಆಯೋಗ ಹೇಳಿದೆ. ವೈದ್ಯರು ಪ್ರಿಸ್ಕ್ರಿಪ್ಷನ್ ಬರೆಯಲು ಬಳಸಬಹುದಾದ ಟೆಂಪ್ಲೇಟ್ ಗಳನ್ನು ಕೂಡ ಒದಗಿಸಲಾಗಿದೆ ಎಂದು ಆಯೋಗ ತಿಳಿಸಿದೆ.

LEAVE A REPLY

Please enter your comment!
Please enter your name here