ಎಮು (Dromaius novachollandiae)
ಮಕ್ಕಳಿಗಾಗಿ ವಿಶೇಷ ಮಾಹಿತಿ
ಇದು ಆಸ್ಟ್ರೇಲಿಯಾ ಖಂಡದ ರಾಷ್ಟ್ರಪಕ್ಷಿ. ಹಾರಲಾಗದ ಎಮು ಪಕ್ಷಿಯು ತನ್ನನ್ನು ತಾನು ಚೆನ್ನಾಗಿ ಎಲ್ಲಾ ರೀತಿಯಲ್ಲಿಯೂ ಹವಾಮಾನಕ್ಕೆ ಒಗ್ಗಿಸಿಕೊಳ್ಳುತ್ತದೆ. ಒಂದು ಘಂಟೆಗೆ 40 ಮೈಲಿ ವೇಗದಲ್ಲಿ ಓಡುವ ಎಮು, ಒಂದು ಜಿಗಿತಕ್ಕೆ ಒಂಭತ್ತು ಅಡಿ ಉದ್ದವನ್ನು ದಾಟುತ್ತೆ. 5-6 ಅಡಿ ಎತ್ತರ ಬೆಳೆಯುವ ಎಮು 90-120 ಪೌಂಡುಗಳಷ್ಟು ತೂಕವಿರುತ್ತೆ.
ಅಕ್ಟೋಬರ್ ನಿಂದ ಏಪ್ರಿಲ್ ವರೆಗೂ ಸಂತಾನೋತ್ಪತ್ತಿ ಸಮಯ 50-52 ದಿನಗಳಲ್ಲಿ ಮೊಟ್ಟೆಯೊಡೆದು ಮರಿಗಳು ಹೊರ ಬರುತ್ತದೆ. ಹುಟ್ಟಿದಾಗ ಕೇವಲ 10 ಇಂಚುಗಳು ಇರುವ ಎಮು ಬೇಗ ಹವಾಮಾನಕ್ಕೆ ಒಗ್ಗಿಕೊಂಡು ಬಲಿಷ್ಟವಾಗಿ ಬೆಳೆಯುತ್ತವೆ.
ಮರಿಗಳು ಮೊದಲು ಮೂರು ತಿಂಗಳು ಆರೈಕೆಯಲ್ಲಿ ಬೆಳೆಯುತ್ತದೆ. ತದನಂತರ ಸ್ವತಂತ್ರಪೂರ್ಣ ಜೀವಿಗಳಾಗುತ್ತದೆ. ತವಕಯುತ ನೋಟ, ನಾಜೂಕು ನಡೆ ಇವಗಳ ವೈಶಿಷ್ಟ್ಯ.
ಮೊಟ್ಟೆಯೊಡೆದಾಗ ನೋಡಲು ಕಪ್ಪು ಬಿಳಿ ಪಟ್ಟೆಗಳಿಂದ ಕೂಡಿರುತ್ತದೆ. ಆದರೆ ಮೂರು ತಿಂಗಳಾದ ಬಳಿಕ ಕಪ್ಪುಬಣ್ಣವಾಗಿ ಮಾರ್ಪಾಡಾಗುತ್ತದೆ. ಆನಂತರ ಪ್ರಬುಧ್ಧವಾಗಿ ಬೆಳೆಯುತ್ತಾ ಕಂದು ಬಣ್ಣವಾಗಿ ಪರಿವರ್ತನೆ ಕಾಣುತ್ತದೆ. ಎಮು ಪ್ರಾಣಿ ಸಾಕಣೆ ಮಾಡುವವರಿಗೆ ಇದು ವಾಣಿಜ್ಯ ಪ್ರಾಣಿ. ಉಷ್ಟ್ರಪಕ್ಷಿಯ ನಂತರದ 2ನೇ ದೊಡ್ಡ ಹಾರಲಾಗದ ಪಕ್ಷಿ ಎಮು.