“ಎಡಗೈ ಅಪಘಾತಕ್ಕೆ ಕಾರಣ” ಸಿನಿಮಾ ಪ್ರೇರಣೆ – ಎಡಗೈ ಬಳಕೆದಾರರಿಗೆ ವಿಶೇಷ ಹೆಲ್ಮೆಟ್

ಮಂಗಳೂರು: ಎಡಗೈ ಬಳಕೆದಾರರಿಗೆಂದೇ “ವೇಗ” ಹೆಲ್ಮೆಟ್ ಕಂಪನಿ ವಿಶೇಷವಾದ ಹೆಲ್ಮೆಟ್ ವಿನ್ಯಾಸಗೊಳಿಸಿ ಬಿಡುಗಡೆ ಮಾಡಿದೆ.‌

ಎಡಗೈ ಬಳಕೆದಾರರೇ ಕಥಾಹಂದರವಾಗಿರುವ “ಎಡಗೈ ಅಪಘಾತಕ್ಕೆ ಕಾರಣ” ಎನ್ನುವ ಸಿನಿಮಾದಿಂದ ಪ್ರೇರಿತಗೊಂಡ “ವೇಗ” ಕಂಪನಿ ಎಡಗೈ ಬಳಸುವವರಿಗೆಂದೇ 1308 ಸೌತ್ ಪಾವ್ ಎಂಬ ವಿಶೇಷ ಹೆಲ್ಮೆಟ್ ಲಾಂಚ್ ಮಾಡಿದೆ. ಇದು ಎಡಗೈ ಬಳಕೆದಾರರಿಗೆ ಬಹಳಷ್ಟು ಸುಲಭವಾಗಿದೆ. ಖಾಸಗಿ ಹೋಟೆಲ್ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ “ಎಡಗೈ ಅಪಘಾತಕ್ಕೆ ಕಾರಣ” ಚಿತ್ರತಂಡ ಭಾಗಿಯಾಗಿ ಸಿನಿಮಾದ ಬಗ್ಗೆ ಹಾಗೂ “ವೇಗ” ಕಂಪನಿಯ ಹೆಲ್ಮೆಟ್ ತಮ್ಮ ಚಿತ್ರಕ್ಕೆ ಬೆಂಬಲ ನೀಡಿದ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಹೆಲ್ಮೆಟ್ ಐ ಎಸ್ ಐ ಸರ್ಟಿಫೈಡ್ ಹೊಂದಿದೆ. ದಿಗಂತ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ಕಾನ್ಸೆಪ್ಟ್ “ವೇಗ” ಹೆಲ್ಮೆಟ್ ಕಂಪನಿಯವರಿಗೆ ಇಷ್ಟವಾಗಿದ್ದು, ಅವರು ಈ ವಿಶೇಷ ಹೆಲ್ಮೆಟ್ ಮೂಲಕ ಚಿತ್ರತಂಡದ ಜೊತೆ ಕೈಜೋಡಿಸಿದ್ದಾರೆ. ಮೊದಲ ಬಾರಿಗೆ ಇಂತದ್ದೊಂದು ಹೆಲ್ಮೆಟ್ ಮಾರುಕಟ್ಟೆಗೆ ಬಿಡುಗಡೆ ಆಗುತ್ತಿದೆ.

LEAVE A REPLY

Please enter your comment!
Please enter your name here