ಲಿಫ್ಟ್‌ ಕೇಳುತ್ತಾ 14 ದೇಶ ಸುತ್ತಿ ಮೈಸೂರಿಗೆ ತಲುಪಿದ ಫ್ರಾನ್ಸ್‌ ನ ಲುಕಾಸ್‌ ವೆನ್ನಾರ್‌

ಮಂಗಳೂರು: ಲುಕಾಸ್‌ ವೆನ್ನಾರ್ ಎನ್ನುವ 23 ವರ್ಷದ‌ ಫ್ರಾನ್ಸ್ ಪ್ರಜೆ ಕಳೆದ ಏಳು ತಿಂಗಳಿನಿಂದ ವಿಶ್ವಪರ್ಯಟನೆ ಮಾಡುತ್ತಿದ್ದಾನೆ. ಆದರೆ ಈತ ಒಂದೇ ಒಂದು ರೂಪಾಯಿ ಖರ್ಚು ಮಾಡದೆ ವಿಶ್ವಪರ್ಯಟನೆ ಮಾಡುತ್ತಿರುವುದು ಮಾತ್ರ ವಿಶೇಷ.

ಲುಕಾಸ್‌ ವೆನ್ನಾರ್ 2023 ಫೆಬ್ರವರಿ 4ರಂದು ಫ್ರಾನ್ಸ್ ನಿಂದ ವಿಶ್ವಪರ್ಯಟನೆ ಆರಂಭಿಸಿದ್ದಾನೆ. ಆದರೆ ಎಲ್ಲಿಯೂ ಟಿಕೆಟ್ ಖರೀದಿಸದೆ ಕೇವಲ ಲಿಫ್ಟ್ ಕೊಡಿ ಎಂದು ಕೇಳುವ ಮೂಲಕ ಪ್ರಯಾಣ ಮಾಡುತ್ತಿರುವ ಲುಕಾಸ್ ಹಡಗು, ಕಾರು, ಬೈಕ್, ಟ್ರಕ್ ಗಳ ಮೂಲಕ ಸಂಚಾರ ಮಾಡುತ್ತಿದ್ದಾನೆ. ಫ್ರಾನ್ಸಿನಿಂದ ಆರಂಭಗೊಂಡ ಈತ ಪ್ರಯಾಣ ಮಾಡುತ್ತಾ ಆಫ್ರಿಕಾ, ಚೀನಾ, ಟಿಬೆಟ್, ಖಜಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಸೇರಿದಂತೆ 14‌ ಕ್ಕೂ ಹೆಚ್ಚು ದೇಶಗಳಲ್ಲಿ ಸುತ್ತಾಡಿದ್ದಾನೆ. ಉತ್ತರ ಭಾರತದ ಕಾಶ್ಮೀರದಿಂದ ಕನ್ಯಾಕುಮಾರಿಯವರಿಗೆ ಸಂಚಾರ ಮಾಡುತ್ತಿರುವ ಲುಕಾಸ್‌ ಈಗ ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಬಂದಿದ್ದಾನೆ.

LEAVE A REPLY

Please enter your comment!
Please enter your name here