ದೈತ್ಯ ಪಾಂಡಾ (Ailuropoda melanoleuca)
ಮಕ್ಕಳಿಗಾಗಿ ವಿಶೇಷ ಮಾಹಿತಿ
ಚೀನಾ ದೇಶದ ರಾಷ್ಟ್ರಪ್ರಾಣಿ. ಅತ್ಯಂತ ವಿರಳವಾದ ಕರಡಿಯ ಜಾತಿ. ಬಿದಿರು ಹೇರಳವಾಗಿ ಬೆಳೆಯುವ ಕಾಡುಗಳಲ್ಲಿ, ಪರ್ವತ ಪ್ರದೇಶಗಳಲ್ಲಿ ವಿಶೇಷವಾಗಿ ಕೆಲವು ಪರ್ವತ ಶ್ರೇಣಿಗಳಾದ ಮಧ್ಯ ಚೀನಾ, ಸಿಚುಯಾನ್, ಶಾನ್ಜ್, ಗನ್ಸು ಪ್ರಾಂತ್ಯಗಳಲ್ಲಿ ಕಾಣಲಾಗಿದೆ.
ಜಾಗತೀಕರಣದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಕಾಡುಗಳ ಒತ್ತುವರಿ, ಕಾಡುಗಳ ನಾಶ, ವ್ಯವಸಾಯ/ಬೇಸಾಯ, ಬಿದಿರು ವನಗಳ ನಾಶದಿಂದ ಈ ಪಾಂಡಾಗಳು ಪರ್ವತಶ್ರೇಣಿಯ ದಟ್ಟಕಾಡುಗಳಲ್ಲಿ ಅವಿತು ಜೀವಿಸಬೇಕಾದಂತಹ ಪರಿಸ್ಥಿತಿ ಬಂದೊದಗಿದೆ.
ದೈತ್ಯ ಪಾಂಡಾಗಳು ಪರ್ವತ ಶ್ರೇಣಿಗಳ 5000-10,000 ಅಡಿ ಎತ್ತರದಲ್ಲಿ ತಂಪಾದ ಪ್ರದೇಶದಲ್ಲಿ, ಎಲ್ಲಿ ಹೆಚ್ಚಾಗಿ ಮಳೆ, ಮಂಜು ಮುಸುಕಿನ ವಾತಾವರಣ ಹಾಗೂ ದಟ್ಟ್ ಮೋಡಗಳು ಕವಿದಿರುವುದೋ ಅಲ್ಲಿ ಜೀವಿಸುತ್ತೆ.
26-84 ಪೌಂಡ್ ನಷ್ಟು ಬಿದಿರನ್ನು ದಿನಕ್ಕೊಮ್ಮೆ ಸೇವಿಸುತ್ತದೆ. ದೇಹವು ದೈತ್ಯಾಕಾರವಾಗಿದ್ದರೂ ಸರಾಗವಾಗಿ ದೊಡ್ಡ ದೊಡ್ಡ ಮರಗಳನ್ನು ಹತ್ತುತ್ತದೆ.
330 ಪೌಂಡ್ ತೂಕವಿರುವ ವಯಸ್ಕ ದೈತ್ಯ ಪಾಂಡಾಗಳು ಪ್ರಧಾನವಾಗಿ ಸಸ್ಯಹಾರಿಗಳಾಗಿದ್ದು ಚಳಿಗಾಲದಲ್ಲಿ ದೊಡ್ಡ ಮರಗಳ ಪೊಟರೆಗಳಲ್ಲಿ ಅಥವಾ ಗುಹೆಗಳಲ್ಲಿ ರಕ್ಷಣೆ ಪಡೆದು ವಿಶ್ರಮಿಸುತ್ತದೆ.