ಇಂಪಾಲ (Aepyceros melampus)
ಮಕ್ಕಳಿಗಾಗಿ ವಿಶೇಷ ಮಾಹಿತಿ
ಜಿಂಕೆ ಜಾತಿಯ ಅನೇಕ ವರ್ಗಗಳಲ್ಲಿ ಇದೊಂದು ಜಾತಿಯು. ಆಫ್ರಿಕದ ಕಾಡು ಅರಣ್ಯಗಳಲ್ಲಿ ವಾಸಿಸುತ್ತವೆ. ಮಧ್ಯಮ ಗಾತ್ರದ ಜಿಂಕೆಯಾಗಿದ್ದು, ಹುಲ್ಲುಗಾವಲಿನಲ್ಲಿರುತ್ತವೆ. ಗಂಡು ಜಿಂಕೆಗಳಿಗೆ ಬಾಗಿದ ಕೊಂಬುಗಳಿದ್ದು ಅವು 90ಸೆಂ.ಮೀ. ಉದ್ದವಿರುತ್ತವೆ. ಈ ಜಿಂಕೆಗಳಿಗೆ ಸ್ವಾಭಾವಿಕ ಬೇಟೆಗಳು ಚಿರತೆ, ಸಿಂಹ, ಮೊಸಳೆ, ಕತ್ತೆ ಕಿರುಬಗಳು ಆಪತ್ತು ಬಂದಾಗ ತಕ್ಷಣ ಪ್ರತಿಕ್ರಿಯಿಸಿ ಒಂಭತ್ತು ಮೀಟರ್ ಅಂತರದಲ್ಲಿ ಎರಡು ಮೇಟರ್ ಎತ್ತರಕ್ಕೆ ಜಿಗಿಯುತ್ತದೆ. ತನ್ನ ಬೇಟೆಯನ್ನು ದಾರಿ ತಪ್ಪಿಸಲು ಹೀಗೆ ಮಾಡುತ್ತದೆ. ಮಾಂಸಾಹಾರಿ ಪ್ರಾಣಿಗಳಿಗೆ ಬಲಿಯಾಗುತ್ತದೆ. ಇವು 12 ವರ್ಷ ಬದುಕುತ್ತವೆ.