ಇಂದು ಸಂಜೆ 6.04ಕ್ಕೆ ʼವಿಕ್ರಮ್‌ʼ ಲ್ಯಾಂಡಿಂಗ್ – ಯೋಜನೆಯಲ್ಲಿ ಬದಲಾವಣೆಯಿಲ್ಲ ಇಸ್ರೋ ಸ್ಪಷ್ಟನೆ

ಮಂಗಳೂರು(ಚೆನ್ನೈ): ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಚಂದ್ರನ ಮೇಲೆ ಪೂರ್ವಯೋಜನೆಯಂತೆ ಚಂದ್ರನ ಮೇಲೆ ಲ್ಯಾಂಡರ್‌ ಅನ್ನು ಇಳಿಸುತ್ತದೆ ಎಂದು ಇಸ್ರೋ ಅಧ್ಯಕ್ಷ ಸೋಮನಾಥ್‌ ಹೇಳಿದ್ದಾರೆ. ಆ.27ರಂದು ಚಂದ್ರನ ಮೇಲೆ ವಿಕ್ರಮ್‌ ಲ್ಯಾಂಡ್ ಆಗಲಿದೆ ಎಂಬ ಪ್ರಶ್ನೆ ಕುರಿತು ಈ ಮೇಲಿನಂತೆ ಸ್ಪಷ್ಟನೆ ನೀಡಿದ್ದಾರೆ. ಮೊದಲು ಯೋಜಿಸಿದಂತೆ ಆ.23ರ ಸಂಜೆ 6.04 ನಿಮಿಷಕ್ಕೆ ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಕಾಲಿಡಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸೋಮನಾಥ್‌ ತಿಳಿಸಿದ್ದಾರೆ.

ಚಂದ್ರಯಾನದ ಎಲ್ಲ ವ್ಯವಸ್ಥೆಗಳು ಸಮರ್ಪಕವಾಗಿದೆ. ಸಿಸ್ಟಮ್‌ಗಳು ನಿಯಮಿತ ತಪಾಸಣೆಗೆ ಒಳಗಾಗುತ್ತಿವೆ. ಸುಗಮ ನೌಕಾಯಾನ ಮುಂದುವರಿಯುತ್ತಿದೆ. ಮಿಷನ್ ಆಪರೇಷನ್ಸ್ ಕಾಂಪ್ಲೆಕ್ಸ್ ಉತ್ಸಾಹದಿಂದ ಮುಂದುವರಿಯುತ್ತಿದೆ ಎಂದು ಹೇಳಿದ್ದಾರೆ. ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದೆ. ಕೊನೆಯ ಗಳಿಗೆಯಲ್ಲಿ ಯಾವುದೇ ಸಮಸ್ಯೆ ಉಂಟಾದರೆ, ಪ್ಲಾನ್ ಬಿ ಕೈಗೊಳ್ಳುವ (ಆ.27ರ ಲ್ಯಾಂಡಿಂಗ್)‌ ಸಾಧ್ಯತೆ ಇದೆ. ಮೂನ್ ಲ್ಯಾಂಡರ್ ತನ್ನ ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾದೊಂದಿಗೆ ಲ್ಯಾಂಡಿಂಗ್ ಸೈಟ್‌ನ ಚಿತ್ರಗಳನ್ನು ಸೆರೆಹಿಡಿಯುತ್ತಿದೆ. ಮೂನ್ ಲ್ಯಾಂಡರ್ ಹಜಾರ್ಡ್ ಡಿಟೆಕ್ಷನ್ ಅಂಡ್ ಅವಾಯಿಡೆನ್ಸ್ ಕ್ಯಾಮೆರಾ ಎಂಬ ಮತ್ತೊಂದು ಕ್ಯಾಮೆರಾವನ್ನು ಸಹ ಹೊಂದಿದೆ. ಈ ಕ್ಯಾಮರಾ ಬಂಡೆಗಳು ಅಥವಾ ಆಳವಾದ ಕಂದಕಗಳಿಲ್ಲದ ಸುರಕ್ಷಿತ ಲ್ಯಾಂಡಿಂಗ್ ಪ್ರದೇಶವನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ.

LEAVE A REPLY

Please enter your comment!
Please enter your name here