ಮಹಿಳೆಯನ್ನು ಹಿಂಬಾಲಿಸಿ ಕಿರುಕುಳ – ಆರೋಪಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದ ಮಂಗಳೂರು ನ್ಯಾಯಾಲಯ

ಮಂಗಳೂರು: ಕದ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಕದ್ರಿ ನ್ಯೂ ರೋಡ್ ನಲ್ಲಿರುವ ಮಹಿಳೆಯೊಬ್ಬರ ಮನೆಗೆ ಬಂದು ಅಸಭ್ಯವಾಗಿ ವರ್ತಿಸಿದ್ದಲ್ಲದೇ ಮಹಿಳೆಯನ್ನು ಹಿಂಬಾಲಿಸಿ ಲೈಂಗಿಕ ಕಿರುಕುಳ ನೀಡಿರುವ ಮಂಗಳೂರಿನ ಕಟ್ಟೆ ಪುಣಿ, ಜೆಪ್ಪಿನ ಮೊಗರು ನಿವಾಸಿ ರಾಜೇಶ್ ಎಂಬಾತನ ವಿರುದ್ದ ಕದ್ರಿ ಪೋಲೀಸ್ ಠಾಣೆಯಲ್ಲಿ ಐ ಪಿ ಸಿ ಕಲಂ 354(d) ,504 ,506 ರಡಿಯಲ್ಲಿ ದೂರು ದಾಖಲಿಸಿದ್ದ ಪೋಲೀಸ್ ಉಪ ನಿರೀಕ್ಷಕರಾದ ಅನಿತಾ ನಿಕ್ಕಂ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ಮಂಗಳೂರಿನ ಆರನೇ ನ್ಯಾಯಾಲಯದ ನ್ಯಾಯಾಧೀಶರಾದ ಅಂಬ್ರಿನ್ ಸುಲ್ತಾನ ಆರೋಪಿಯ ವಿರುದ್ಧದ ಕಲಂ 354(d) ರ ಅಪರಾಧ ಸಾಬೀತಾಗಿರುವ ಹಿನ್ನೆಲೆಯಲ್ಲಿ ಅಪರಾಧಿ ರಾಜೇಶ್‌ ಗೆ 1 ತಿಂಗಳು ಜೈಲು ವಾಸ ಹಾಗೂ ರೂಪಾಯಿ 5000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಈ ಕೇಸ್ ನಲ್ಲಿ ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಮೋಹನ್ ಕುಮಾರ್ ಭಾಗಶಃ ಸಾಕ್ಷಿಗಳ ವಿಚಾರಣೆ ನಡೆಸಿದ್ದರು. ಆ ಬಳಿಕ ಸಹಾಯಕ ಸರಕಾರಿ ಅಭಿಯೋಜಕ ಜನಾರ್ದನ್  ಸಾಕ್ಷಿಗಳ ವಿಚಾರಣೆ ನಡೆಸಿ ಸರಕಾರದ ಪರವಾಗಿ ವಾದ ಮಂಡಿಸಿದ್ದರು.

LEAVE A REPLY

Please enter your comment!
Please enter your name here