ಮಂಗಳೂರು(ನವದೆಹಲಿ): ಭಾರತೀಯ ಕ್ರಿಕೆಟ್ ತಂಡದ ಮುಂದಿನ 5 ವರ್ಷಗಳ ಅವಧಿಯ ಮಾಧ್ಯಮ ಹಕ್ಕುಗಳನ್ನು ಮುಖೇಶ್ ಅಂಬಾನಿ ಒಡೆತನದ ವಯಕಾಮ್ 18 ಸಂಸ್ಥೆಯು ತನ್ನ ತೆಕ್ಕೆಗೆ ಹಾಕಿಕೊಂಡಿದೆ.
2023-28ರವರೆಗೆ 5 ವರ್ಷಗಳ ಕಾಲ ಭಾರತದ ತವರು ಪಂದ್ಯಗಳ ಪ್ರಸಾರದ ಹಕ್ಕನ್ನು ಹೊಂದುವ ಮೂಲಕ, ಈ ಹಿಂದೆ ಮಧ್ಯಮ ಹಕ್ಕು ಹೊಂದಿದ್ದ ವಾಲ್ಟ್ ಡಿಸ್ನಿ ಗೆ ಅಂಬಾನಿ ಸೆಡ್ಡು ಹೊಡೆದಿದ್ದಾರೆ.ವಯಕಾಮ್ 18 ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸುಮಾರು 59.63 ಶತಕೋಟಿ ರೂಪಾಯಿಗಳ ಮೌಲ್ಯದ ಬಿಡ್‌ನಲ್ಲಿ ಮುಂದಿನ ಐದು ವರ್ಷಗಳ ಕಾಲ ಭಾರತೀಯ ತಂಡದ ಪಂದ್ಯಗಳನ್ನು ಸ್ಟ್ರೀಮ್ ಮಾಡಲು ಡಿಜಿಟಲ್ ಮತ್ತು ಟಿವಿ ಪ್ರಸಾರ ಹಕ್ಕುಗಳನ್ನು ಗೆದ್ದಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತಿಳಿಸಿದೆ.