ಕಾಡಾನೆ ದಾಳಿ – ಅರಣ್ಯ ಇಲಾಖೆ ಶಾರ್ಪ್ ಶೂಟರ್ ವೆಂಕಟೇಶ್ ಮೃತ್ಯು

ಮಂಗಳೂರು(ಸಕಲೇಶಪುರ): ಆಲೂರು ತಾಲೂಕಿನ ಹಳ್ಳಿಯೂರು ಗ್ರಾಮದಲ್ಲಿ ಗಾಯಗೊಂಡಿದ್ದ ಭೀಮ ಕಾಡಾನೆಗೆ ಚಿಕಿತ್ಸೆ ನೀಡಲು ಶಾರ್ಪ್ ಶೂಟ್ ಮುಖಾಂತರ ಅರವಳಿಕೆ ನೀಡಲು ಸಂದರ್ಭದಲ್ಲಿ ಭೀಮ ಕಾಡಾನೆ ಅರಣ್ಯ ಇಲಾಖೆ ಶಾರ್ಪ್ ಶೂಟರ್ ವೆಂಕಟೇಶ್ ಮೇಲೆ ದಾಳಿ ನಡೆಸಿದ್ದು ಗಂಭೀರವಾಗಿ ಗಾಯಗೊಂಡ ವೆಂಕಟೇಶ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಸಕಲೇಶಪುರದ ಆಲೂರು ತಾಲೂಕಿನಲ್ಲಿ ಗಾಯಗೊಂಡು ತಿರುಗಾಡುತಿದ್ದ ಭೀಮ ಕಾಡಾನೆಗೆ ಹೆಚ್ಚಿನ ಚಿಕಿತ್ಸೆ ನೀಡಲು ಅರಣ್ಯ ಇಲಾಖೆ ಮುಂದಾಗಿದ್ಧು, ಈ ಹಿನ್ನೆಲೆಯಲ್ಲಿ ಆಲೂರು ಸಮೀಪದ ಹಳ್ಳಿಯೂರಿನಲ್ಲಿ ಕಾಡಾನೆಗೆ ಅರೆವಳಿಕೆ ಮದ್ಧು ನೀಡಲು ಶಾರ್ಪ್ ಶೂಟರ್ ವೆಂಕಟೇಶ್ ಮುಂದಾದಾಗ ಏಕಾಏಕಿ ಬಂದ ಕಾಡಾನೆ ವೆಂಕಟೇಶ್ ಅವರ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿತ್ತು.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here