ಚಲಿಸುತ್ತಿರುವ ರೈಲಿನಲ್ಲಿ ಕಳ್ಳತನಕ್ಕೆ ಯತ್ನಿಸಿ ಕಿಟಕಿಯಲ್ಲಿ ಸಿಲುಕಿಕೊಂಡ ಯುವಕ-ವಿಡಿಯೋ ವೈರಲ್

ಮಂಗಳೂರು (ಬೇಗುಸರಾಯ್): ರೈಲಿನಲ್ಲಿ ಕಳ್ಳತನವೆಸಗಿ, ಅಲ್ಲಿಂದ ಪರಾರಿಯಾಗುವ ಪ್ರಯತ್ನದಲ್ಲಿ ಚಲಿಸುತ್ತಿರುವ ರೈಲಿನ ಕಿಟಕಿಗೆ ನೇತಾಡುತ್ತಿರುವ ಯುವಕನ ವಿಡಿಯೋವನ್ನು ಪ್ರಯಾಣಿಕರು ಸೆರೆ ಹಿಡಿದಿದ್ದು,  ವೈರಲ್ ಆಗಿದೆ.

ಪ್ರಯಾಣಿಕರ ಹಿಡಿತದಿಂದ ಪಾರಾಗಲು ಚಲಿಸುತ್ತಿರುವ ಕಿಟಕಿಯ ಸರಳುಗಳನ್ನು ಹಿಡಿದುಕೊಂಡು ಹಲವಾರು ಕಿ.ಮೀ. ಪ್ರಯಾಣಿಸುವ ಮೂಲಕ ಕಳ್ಳನು ತನ್ನ ಜೀವನವನ್ನೇ ಅಪಾಯಕ್ಕೊಡ್ಡಿದ್ದಾನೆ. ಈ ಘಟನೆಯು ಸೋನ್ ಪುರ್ ಬರೌನ್ ರೈಲ್ವೆ ವಲಯದ ಬಚ್ವಾಡಾ ಜಂಕ್ಷನ್ ಬಳಿ ನಡೆದಿದೆ. ಆರೋಪಿಯು ಪ್ರಯಾಣಿಕರಿಂದ ತಪ್ಪಿಸಿಕೊಳ್ಳಲು ಕಿಟಕಿಯ ಸರಳುಗಳಿಗೆ ನೇತಾಡತೊಡಗಿದ್ದು, ಈ ದೃಶ್ಯವನ್ನು ಪ್ರಯಾಣಿಕರು ತಮ್ಮ ಮೊಬೈಲ್ ಗಳಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ಚಲಿಸುತ್ತಿರುವ ರೈಲಿನಿಂದ ಜಿಗಿದು ಪರಾರಿಯಾಗದಂತೆ ತಡೆಯಲು ಪ್ರಯಾಣಿಕರು ಆತನ ಕೈಯನ್ನು ಬಲವಾಗಿ ಹಿಡಿದುಕೊಂಡಿದ್ದಾರೆ. ಬಚ್ವಾಡಾ ಜಂಕ್ಷನ್ ಗೆ ರೈಲು ತಲುಪುವವರೆಗೂ ಆ ಆರೋಪಿಯನ್ನು ಪ್ರಯಾಣಿಕರು ಹಿಡಿದುಕೊಂಡಿದ್ದು, ನಂತರ ಆತನನ್ನು ರೈಲ್ವೆ ರಕ್ಷಣಾ ದಳದ ಪೊಲೀಸರಿಗೆ ಒಪ್ಪಿಸಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here