ಅಪಾಸಮ್(Didelphis virginiana)
ಮಕ್ಕಳಿಗಾಗಿ ವಿಶೇಷ ಮಾಹಿತಿ
ಇದು ಮಾಧ್ಯಮ ಗಾತ್ರದ ಪ್ರಾಣಿ. ಅಪಾಸಮ್ ಅಮೇರಿಕದ ಅರಣ್ಯಗಳಲ್ಲಿ, ಕೃಷಿ ಭೂಮಿಯಲ್ಲಿ ಕಂಡುಬರುತ್ತವೆ. ಇವು ಸಸ್ಯಹಾರಿಯೂ ಹೌದು, ಮಾಂಸಾಹಾರಿಯೂ ಹೌದು. ಸಿಗುವ ಎಲ್ಲವನ್ನೂ ತಿನ್ನುತ್ತವೆ. ಕೀಟಗಳು, ಹಕ್ಕಿ,ಕಪ್ಪೆ, ಹಾವು,ಮಳೆಹುಳಗಳನ್ನು ತಿನ್ನುತ್ತವೆ. ಇವುಗಳಿಗೆ ವೈರಿಗಳು ಬಹಳ. ಪ್ರಮುಖವಾಗಿ ಹಕ್ಕಿಗಳು, ಗೂಬೆಗಳು, ಹದ್ದುಗಳು, ನಾಯಿಗಳು, ನರಿಗಳು, ಬೆಕ್ಕುಗಳು.