ಪುತ್ತೂರು: ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದ ಹೆಚ್ಚುವರಿ ನಾಲ್ಕು ಹಾಗೂ 5ನೇ ಪ್ಲಾಟ್ ಫಾರಂಗಳ ನಿರ್ಮಾಣ ಕಾಮಗಾರಿ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರ ರದ್ದು ಮತ್ತು ಕೆಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.
ನಂಬರ್ 07486 ಕಬಕ ಪುತ್ತೂರು ಮಂಗಳೂರು ಸೆಂಟ್ರಲ್ ರೈಲು ಸೆ. 8ರಂದು ಹಾಗೂ ನಂಬರ್ 06485 ಮಂಗಳೂರು ಸೆಂಟ್ರಲ್- ಕಬಕ ಪುತ್ತೂರು ರೈಲು ಸೆ. 9ರಂದು ಸಂಪೂರ್ಣ ರದ್ದು ಮಾಡಲಾಗಿದೆ. ನಂಬರ್ 10107 ಮಡಗಾಂವ್ ಜಂಕ್ಷನ್- ಮಂಗಳೂರು ಸೆಂಟ್ರಲ್ ಮೆಮು ಎಕ್ಸ್ಪ್ರೆಸ್ ರೈಲು ಸೆ. 8ರಂದು ತೋಕೂರು ಹಾಗೂ ಮಂಗಳೂರು ಸೆಂಟ್ರಲ್ ಮಧ್ಯೆ ಸಂಚರಿಸುವುದಿಲ್ಲ. ನಂಬರ್ 10108 ಮಂಗಳೂರು ಸೆಂಟ್ರಲ್-ಮಡಗಾಂವ್ ಜಂಕ್ಷನ್ ಮೆಮು ರೈಲು ಸೆ. 8ರಂದು ಮಂಗಳೂರು ಸೆಂಟ್ರಲ್ ಹಾಗೂ ತೋಕೂರು ಮಧ್ಯೆ ಸಂಚರಿಸುವುದಿಲ್ಲ. ಬದಲಾಗಿ ಈ ರೈಲು ತೋಕೂರಿನಿಂದಲೇ ತನ್ನ ನಿಗದಿತ ಸಮಯ ಸಂಜೆ 4.25ಕ್ಕೆ ಹೊರಡಲಿದೆ. ನಂಬರ್ 06602 ಮಂಗಳೂರು ಸೆಂಟ್ರಲ್- ಮಡಗಾಂವ್ ಸ್ಪೆಷಲ್ ರೈಲು ಮಂಗಳೂರಿನಿಂದ ಬೆಳಗ್ಗೆ 5.30ಕ್ಕೆ ಹೊರಡ ಬೇಕಿರುವುದು ಸೆ. 5, 6, 9 ರಂದು ಬೆಳಗ್ಗೆ 6ಕ್ಕೆ ಹೊರಡಲಿದೆ. ನಂಬರ್ 16649 ಮಂಗಳೂರು ಸೆಂಟ್ರಲ್ ನಾಗರಕೋವಿಲ್ ಜಂಕ್ಷನ್ ಪರಶುರಾಮ ಎಕ್ಸ್ಪ್ರೆಸ್ ರೈಲು ಸೆ. 9ರಂದು ಮಂಗಳೂರು ಸೆಂಟ್ರಲ್ ನಿಂದ ನಿಗದಿತ ಸಮಯ ಬೆಳಗ್ಗೆ 5.05ಕ್ಕೆ ಹೊರಡುವ ಬದಲು 5.35ಕ್ಕೆ ಹೊರಡಲಿದೆ.
16610 ಮಂಗಳೂರು ಸೆಂಟ್ರಲ್- ಕೋಝಿಕೋಡ್ ಎಕ್ಸ್ಪ್ರೆಸ್ ರೈಲು ಸೆ. 9ರಂದು ಮಂಗಳೂರು ಸೆಂಟ್ರಲ್ ಬದಲಾಗಿ ಮಂಗಳೂರು ಜಂಕ್ಷನ್‌ನಿಂದ 5.15ಕ್ಕೆ ಹೊರಡಲಿದೆ. ನಂಬರ್ 22638 ಮಂಗಳೂರು – ಸೆಂಟ್ರಲ್ – ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ವೆಸ್ಟ್ಕೋಸ್ಟ್ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲನ್ನು ಸೆ. 8ರಂದು ಮಾರ್ಗ ಮಧ್ಯೆ 30 ನಿಮಿಷ ಕಾಲ ನಿಯಂತ್ರಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.