ಜಿ20 ಶೃಂಗಸಭೆ – ದಿಲ್ಲಿಯ ಕೊಳೆಗೇರಿಯನ್ನು ಮುಚ್ಚಿದ ಹಸಿರು ಹೊದಿಕೆ

ಮಂಗಳೂರು(ಹೊಸದಿಲ್ಲಿ): ಜಿ20 ಶೃಂಗಸಭೆಗಾಗಿ ಆಗಮಿಸುವ ಹಲವು ದೇಶಗಳ ಮುಖ್ಯಸ್ಥರನ್ನು ಸ್ವಾಗತಿಸಲು ರಾಷ್ಟ್ರ ರಾಜಧಾನಿ ಹೊಸದಿಲ್ಲಿಯನ್ನು ಶೃಂಗರಿಸಲಾಗಿದೆ. ಬಣ್ಣಬಣ್ಣದ ದೀಪಗಳು, ಅಲಂಕಾರಗಳು, ಕಾರಂಜಿಗಳು ಮತ್ತು ಪುಷ್ಪಾಲಂಕಾರಗಳು ನೋಡುಗರ ಕಣ್ಮನ ಸೆಳೆಯುತ್ತಿದೆ. ಇವೆಲ್ಲವುಗಳ ನಡುವೆ ರಾಜಧಾನಿಯ ಕೊಳೆಗೇರಿ ಪ್ರದೇಶಗಳನ್ನು ಮರೆಮಾಚಲು ಹಲವೆಡೆ ಹಸಿರು ಹೊದಿಕೆಗಳನ್ನೂ ಹಾಕಲಾಗಿದೆ. ಈ ಕುರಿತಾದ ಫೋಟೋಗಳು ಮತ್ತು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ರಾಜಧಾನಿಯ ಸೇತುವೆಗಳು ಮತ್ತು ಫ್ಲೈಓವರ್‌ಗಳ ಅಡಿಯಲ್ಲಿ ವಾಸಿಸುವ ನಿರ್ವಸಿತರಿಗೆ ಅಲ್ಲಿಂದ ಬೇರೆ ಕಡೆ ತೆರಳುವಂತೆಯೂ ಸೂಚಿಸಲಾಗಿದೆ. ರೈತ ನಾಯಕ ಹಾಗೂ ಭಾರತೀಯ ಕಿಸಾನ್‌ ಯೂನಿಯನ್‌ ಅಧ್ಯಕ್ಷ ಸುರ್ಜೀತ್‌ ಸಿಂಗ್‌ ಫೂಲ್‌ ಈ ಕುರಿತ ವೀಡಿಯೋಗಳನ್ನು ಶೇರ್‌ ಮಾಡಿದ್ದಾರೆ.

ಈ ಕುರಿತು ಪೋಸ್ಟ್‌ ಒಂದನ್ನೂ ಮಾಡಿರುವ ಸಿಂಗ್‌ “ಗರೀಬಿ ಹಠಾವೋದಿಂದ ಗರೀಬಿ ಚುಪಾವೋ ತನಕ ಈ ಬಡವರ ಪರ ಸರ್ಕಾರವು ದಿಲ್ಲಿಯ ಕೊಳೆಗೇರಿಗಳನ್ನು ಜಿ20 ಶೃಂಗಸಭೆಗಾಗಿ ಮರೆಮಾಚುತ್ತಿದೆ ಹಾಗೂ ಆರ್ಥಿಕ ಅಸಮಾನತೆಗಳನ್ನು ಮರೆಮಾಚಲು ಹತಾಶ ಯತ್ನ ನಡೆಸಿದೆ. 18ನೇ ಜಿ20 ಶೃಂಗಸಭೆ ರಾಜಧಾನಿಯ ಪ್ರಗತಿ ಮೈದಾನದಲ್ಲಿರುವ ಭಾರತ್‌ ಮಂಟಪಂನಲ್ಲಿ ಸೆಪ್ಟೆಂಬರ್‌ 9 ಮತ್ತು 10ರಂದು ನಡೆಯಲಿದೆ.

ವೀಡಿಯೋಗಾಗಿ ಇಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here