ದರ ಪರಿಷ್ಕರಣೆಗೆ ಮುಂದಾದ ಸರಕಾರ – ದುಬಾರಿಯಾಗಲಿದೆ ಭೂಮಿ, ನಿವೇಶನ, ಸ್ಥಿರಾಸ್ತಿಗಳ ಮೌಲ್ಯ

ಮಂಗಳೂರು: ರಾಜ್ಯ ಸರ್ಕಾರವು ಆಸ್ತಿ ಖರೀದಿದಾರರಿಗೆ ಬಿಗ್ ಶಾಕ್ ನೀಡಿದ್ದು, ರಾಜ್ಯದಲ್ಲಿ ಭೂಮಿ, ನಿವೇಶನ, ಕಟ್ಟಡ ಸೇರಿ ಸ್ಥಿರಾಸ್ತಿಗಳ ಮೌಲ್ಯ ಸದ್ಯದಲ್ಲೇ ದುಬಾರಿಯಾಗಲಿದ್ದು, ಆಸ್ತಿ ಮಾರ್ಗಸೂಚಿ ದರ ಪರಿಷ್ಕರಣೆಗೆ ರಾಜ್ಯ ಸರ್ಕಾರ ಮುಂದಾಗಿದೆ.

ಮಾರುಕಟ್ಟೆ ಮೌಲ್ಯ ಹಾಗೂ ಮಾರ್ಗಸೂಚಿ ದರ ನಡುವೆ ಹೆಚ್ಚಿರುವ ಅಂತರ ತಗ್ಗಿಸಲು ಆಸ್ತಿಗಳ ಮೌಲ್ಯ ಪರಿಷ್ಕರಣೆ ಸಿದ್ಧತಾ ಕಾರ್ಯ ಪೂರ್ಣಗೊಂಡಿದ್ದು, ನಾಳೆ ಪರಿಷ್ಕೃತ ಮಾರ್ಗಸೂಚಿ ದರ ಕರಡು ಪ್ರಕಟವಾಗಲಿದೆ. ಈ ಮೂಲಕ ಸ್ಥಿರಾಸ್ತಿ ಮೌಲ್ಯವನ್ನು ಸರಾಸರಿ ಶೇಕಡಾ 30 ರಷ್ಟು ಹೆಚ್ಚಳ ಮಾಡಲಾಗುತ್ತಿದೆ. ಬೆಂಗಳೂರು ಸುತ್ತಮುತ್ತ ಮಾರ್ಗಸೂಚಿ ದರ ಗರಿಷ್ಠ ಪ್ರಮಾಣದಲ್ಲಿ ನಿಗದಿಯಾಗಿದೆ. ಬಿಬಿಎಂಪಿ ಹೊಸದಾಗಿ ಸೇರ್ಪಡೆಯಾಗಿರುವ ಪ್ರದೇಶಗಳು ಸೇರಿ ಕೆಲವು ಆಯ್ದ ಕಡೆಗಳಲ್ಲಿ ಶೇಕಡಾ 90 ರಷ್ಟು ಮಾರ್ಗಸೂಚಿ ಹೆಚ್ಚಳ ಮಾಡುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here