ಪ್ರಾಣಿ ಪ್ರಪಂಚ-92

ಟೂಕನ್(Ramphastos sulfuratus)


ಮಕ್ಕಳಿಗಾಗಿ ವಿಶೇಷ ಮಾಹಿತಿ

ಮಧ್ಯ ಹಾಗೂ ದ. ಅಮೇರಿಕಾದ ದಟ್ಟವಾದ ಅರಣ್ಯ ಪ್ರದೇಶಗಳಲ್ಲಿ ಕಾಣಸಿಗುವ ಟೂಕನ್‌ ಗಳು, ಅರಣ್ಯದ ಮರಗಳ ಪೊಟರೆಯೊಳಗೆ ಮನೆ ಮಾಡಿಕೊಳ್ಳುತ್ತದೆ.
ಹಣ್ಣುಗಳನ್ನು ಹೇರಳವಾಗಿ ತಿಂದು ಜೀವಿಸುವ ಟೂಕನ್‌ ಪಕ್ಷಿಗಳು ಕೆಲವೊಮ್ಮೆ ಚಿಕ್ಕಪಕ್ಷಿಗಳು ಹಾಗೂ ಹಲ್ಲಿಗಳನ್ನೂ ತಿನ್ನುವುದುಂಟು.
ಜೋಡಿ ಪಕ್ಷಿಗಳಾಗಿ ಅಥವಾ ಸಣ್ಣ ಸಣ್ಣ ಗುಂಪುಗಳಲ್ಲಿ ಜೀವಿಸುವ ಟೂಕನ್‌ ಗಳು ಬಿಳಿ ಹೊಳಪಾದ ಮೊಟ್ಟೆಗಳನ್ನು ವರ್ಷಕೊಮ್ಮೆ ಇಡುತ್ತವೆ.

ಟೂಕನ್‌ ಹಕ್ಕಿಗಳು ತಮ್ಮ ಕರ್ಕಶ ಧ್ವನಿಗೆ ಹೆಸರುವಾಸಿ ಕೆಲವೊಮ್ಮೆ ಕಪ್ಪೆಗಳು ವಟರಗುಟ್ಟುವ ಹಾಗೆ ಕೂಗುತ್ತದೆ. ಇವುಗಳು ಮಾಡುವ ಶಬ್ದ ದಟ್ಟಕಾಡನ್ನು ಚೀರಿ ಅರ್ಧ ಮೈಲಿ ದೂರ ಕೇಳುತ್ತದೆ. ಸೂರ್ಯರಶ್ಮಿ ಧರೆಗೆ ತಾಗದಿರುವಷ್ಟು ದಟ್ಟವಾದ ಅರಣ್ಯ ಪ್ರದೇಶದಲ್ಲಿ ಬೀಜಪ್ರಸಾರದ ಕಾರ್ಯದ ರಾಯಭಾರಿ ಈ ಟೂಕನ್‌ ಹಕ್ಕಿಗಳು ತಾವು ತಿನ್ನುವ ಹಣ್ಣು ಹಂಪಲುಗಳ ಬೀಜವನ್ನು ಕಾಡಿನಾದ್ಯಂತ ಪ್ರಸರಿಸುವುದು ಈ ಹಕ್ಕಿಗಳ ಮುಖ್ಯಕ್ರಿಯೆ.

40 ವಿಧವಾದ ಟೂಕನ್‌ ಗಳನ್ನು ಗುರುತಿಸಲಾಗಿದ್ದು ಏಳು ಇಂಚಿನಿಂದ 2 ಅಡಿ ಉದ್ದವಿರುವುದು. ಹಗುರವಾದ ವೈವಿಧ್ಯ ವರ್ಣಮಯವಾದ ದೊಡ್ಡ ಕೊಕ್ಕುಗಳನ್ನು ಹೊಂದಿದ್ದು, ಈ ವರ್ಣಮಯ ಕೊಕ್ಕುಗಳು, ಸಂತಾನೋತ್ಪತ್ತಿ ಕ್ರಿಯೆಗೆ ಸಂಗಾತಿಯನ್ನು ಆಕರ್ಷಿಸಲು ಸಹಾಯಕಾರಿಯಾಗಿದೆ.
ಕೊಕ್ಕು ವರ್ಣಮಯವಷ್ಟೇ ಅಲ್ಲದೇ ಅತೀ ಹರಿತವಾಗಿ ಗರಗಸದಂತೆ ಚೂಪಾಗಿರುವುದು. ಇದು ಹಣ್ಣುಗಳನ್ನು ಹೊಸೆಯಲು ಸಹಾಯಕಾರಿ. ನಾಲಿಗೆಯು ತೆಳುವಾಗಿಯೂ 6-7 ಇಂಚುಗಳು ಉದ್ದವಾಗಿರುವುದು. ಇದು ಮರಗಳ ರೆಂಬೆಕೊಂಬೆಗಳ ಮೇಲೆ ಹರಿದಾಡುವ ಹಲ್ಲಿ-ಹುಳುಗಳನ್ನು ಹಿಡಿದು ತಿನ್ನಲು ಸಹಾಯಕಾರಿ.

LEAVE A REPLY

Please enter your comment!
Please enter your name here