ಚೈತ್ರಾ ಕುಂದಾಪುರ ಹೆಸರಿನಲ್ಲಿ ಕೋಟಿ ಕೋಟಿ ಮೌಲ್ಯದ ಸೊತ್ತು ಪತ್ತೆ

ಮಂಗಳೂರು (ಬೆಂಗಳೂರು): ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬವರಿಗೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್‌  ಕೊಡಿಸುವುದಾಗಿ ಹಣ ಪಡೆದು ವಂಚಿಸಿದ ಚೈತ್ರ ಮತ್ತು ತಂಡದ ಒಂದೊಂದೇ ಪ್ರಕರಣ ಬೆಳಕಿಗೆ ಬರಿತ್ತಿದ್ದು, ಬೆಂಗಳೂರು ಸಿಸಿಬಿ ಪೊಲೀಸರು ಚೈತ್ರಾಗೆ ಸೇರಿದ ಕೋಟ್ಯಂತರ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.‌

ಸರ್ಚ್‌ ವಾರೆಂಟ್‌ ಪಡೆದು ಶೋಧ ಕಾರ್ಯ ನಡೆಸಿದ ಸಿಸಿಬಿ ಪೊಲೀಸ್‌ ಪಡೆ ಉಡುಪಿಯ ಉಪ್ಪೂರು ಶ್ರೀರಾಮ ಸೊಸೈಟಿಯಲ್ಲಿ ಆಸ್ತಿ, ಬಂಗಾರ ಪತ್ತೆ ಮಾಡಿದೆ. 1 ಕೋಟಿ 08 ಲಕ್ಷ ರೂಪಾಯಿ ಖಾಯಂ ಠೇವಣಿ, ಸೊಸೈಟಿ ಖಾತೆಯಲ್ಲಿ 40 ಲಕ್ಷ ರೂ. ನಗದು, ಮತ್ತು 400 ಗ್ರಾಂ ಚಿನ್ನ ಕೂಡ ಪತ್ತೆ ಮಾಡಿದೆ. ಅಲ್ಲದೇ ತನ್ನ ಸ್ನೇಹಿತೆಯ ಹೆಸರಿನಲ್ಲಿ ಕಾರ್ಕಳದ ಬೈಲೂರು ಸಮೀಪದ ಕಣಜಾರು ಎಂಬಲ್ಲಿ ನಿವೇಶನ ಖರೀದಿಸಿ ಮನೆ ನಿರ್ಮಿಸುತ್ತಿರುವುದು ಬೆಳಕಿಗೆ ಬಂದಿದೆ. ಹಣ ವಸೂಲಿ ಪ್ರಕರಣದಲ್ಲಿ ಶ್ರೀಕಾಂತ್ ನನ್ನು ಪೊಲೀಸರು ವಶಕ್ಕೆ ಪಡೆದ ಬಳಿಕ ಕಾಮಗಾರಿ ಅರ್ಧಕ್ಕೆ ನಿಲ್ಲಿಸಲಾಗಿದೆ.

ಇನ್ನೊಂದೆಡೆ ಆಸ್ಪತ್ರೆಯು ಚೈತ್ರಾ ಹೆಲ್ತ್‌ ಬುಲೆಟಿನ್‌ ಬಿಡುಗಡೆ ಮಾಡಿದ್ದು, ಚೈತ್ರಾ ಕುಂದಾಪುರ ಅವರ ಆರೋಗ್ಯ ಸ್ಥಿರವಾಗಿದೆ. ಆದರೆ, ಎಂಆರ್​ಐ ಸ್ಕ್ಯಾನ್​​​ಗೆ ತಜ್ಞ ವೈದ್ಯರು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಚೈತ್ರಾಳಿಗೆ ವೈದ್ಯರು ಎಂಆರ್​ಐ ಸ್ಕ್ಯಾನ್ ಮಾಡಲಿದ್ದಾರೆ. ಒಂದು ವೇಳೆ ಎಂಆರ್​ಐ ನಾರ್ಮಲ್ ಇದ್ದರೆ ಇಂದೇ ಚೈತ್ರಾ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

LEAVE A REPLY

Please enter your comment!
Please enter your name here