ಇತಿಹಾಸದ ಪುಟ ಸೇರಿದ ಮುಂಬೈ ಡಬ್ಬಲ್ ಡೆಕ್ಕರ್ ಬಸ್‌

ಮುಂಬೈ: ಮುಂಬೈಯ ಲ್ಯಾಂಡ್ ಮಾರ್ಕ್ ಎನಿಸಿದ ಕೆಂಪು ಬಣ್ಣದ ಡಬ್ಬಲ್‌ ಡೆಕ್ಕರ್(ಮಾಳಿಗೆ) ಬಸ್‌ಗೆ ಬೃಹನ್‌ ಮುಂಬೈ ಸಾರಿಗೆ ಇಲಾಖೆ ಗುಡ್‌ ಬೈ ಹೇಳಿದೆ.

ಮುಂಬೈಯ ಎಲೆಕ್ಟ್ರಿಕ್‌ ಸಪ್ಲೈ & ಟ್ರಾನ್ಸ್‌ಪೋರ್ಟ್ ಸಂಸ್ಥೆ ನಗರದಲ್ಲಿ ಕೊನೆಯದಾಗಿ ಓಡಾಡುತ್ತಿದ್ದ ಡಬ್ಬಲ್ ಡೆಕ್ಕರ್ ಬಸ್‌ನ್ನು ತನ್ನ ಸುಪರ್ದಿಗೆ ಪಡೆದಿದೆ. ಇಂದು ಮುಂಜಾನೆ ಮರೊಲ್ ಡಿಪೋದಲ್ಲಿ ಈ ಏಸಿ ರಹಿತವಾದ ಬಸ್‌ನ್ನು ಬಿಇಎಸ್‌ಟಿ ತನ್ನ ವಶಕ್ಕೆ ಪಡೆದಿದೆ. ಬಿಇಎಸ್‌ಟಿ ಮುಂದಿನ 9 ತಿಂಗಳಲ್ಲಿ ಈ ಡಬ್ಬಲ್ ಡೆಕ್ಕರ್ ಬಸ್‌ಗೆ ಬದಲಾಗಿ 900 ಹವಾನಿಯಂತ್ರಿತ ಡಬ್ಬಲ್ ಡೆಕ್ಕರ್ ಬಸ್‌ಗಳನ್ನು ನಗರದ ಸಂಚಾರ ವ್ಯವಸ್ಥೆಗೆ ಹಸ್ತಾಂತರ ಮಾಡಲಿದೆ. 1997ರಲ್ಲಿ ಮೊದಲ ಡಬ್ಬಲ್ ಡೆಕ್ಕರ್‌ ಒಪನ್‌ ಟಾಪ್ ಬಸ್ ಪ್ರವಾಸೋದ್ಯಮಕ್ಕಾಗಿ ಆರಂಭವಾಗಿತ್ತು. ಆದರೆ ಈ ಡಬ್ಬಲ್ ಡೆಕ್ಕರ್ ಸಂಪೂರ್ಣವಾಗಿ ನಿಲುಗಡೆಯಾಗುವುದಿಲ್ಲ, ಹೊಸ ಪ್ಲಾನ್‌ನೊಂದಿಗೆ ಈ ಡಬ್ಬಲ್ ಡೆಕ್ಕರ್ ಮತ್ತೆ ಬರಲಿದೆ ಎಂದು ಬಿಇಟಿಎಸ್ ಹೇಳಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಮುಂಬೈ ಜನ ಈ ಬಸ್‌ಗೆ ಭಾವಪೂರ್ಣ ವಿದಾಯ ಹೇಳುತ್ತಿದ್ದಾರೆ. ಇಂದು ಬಸ್ ತನ್ನ ಪ್ರಯಾಣ ಕೊನೆಗೊಳಿಸಿದೆ.

LEAVE A REPLY

Please enter your comment!
Please enter your name here