ಹಿಂದೂ ಮಹಾಸಾಗರದಲ್ಲಿ ಚೀನಾವನ್ನು ಎದುರಿಸಲು 175 ಯುದ್ಧನೌಕೆ ನಿಯೋಜನೆಗೆ ಮುಂದಾದ ಭಾರತ

ಮಂಗಳೂರು(ಹೊಸದಿಲ್ಲಿ): ಭಾರತದ ಬೃಹತ್ ಆಯಕಟ್ಟಿನ ಭೌಗೋಳಿಕ ಹಿತಾಸಕ್ತಿಯನ್ನು ಕಾಪಾಡುವ ಸಲುವಾಗಿ ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ ವಿಸ್ತರಣೆ ಹೆಜ್ಜೆಗುರುತನ್ನು ತಡೆಯುವ ನಿಟ್ಟಿನಲ್ಲಿ ಸಾಗರ ಸುರಕ್ಷಾ ಪಡೆಯನ್ನು ಮತ್ತಷ್ಟು ಬಲಪಡಿಸಲು ಭಾರತ ಮುಂದಾಗಿದೆ.

ಪ್ರಸ್ತುತ ಸುಮಾರು ಎರಡು ಲಕ್ಷ ಕೋಟಿ ರೂಪಾಯಿ ಮೌಲ್ಯದ 68 ಯುದ್ಧನೌಕೆಗಳನ್ನು ಹೊಂದಿರುವ ಭಾರತೀಯ ನೌಕಾಪಡೆ ಮುಂದಿನ ದಿನಗಳಲ್ಲಿ ಹೆಚ್ಚುವರಿಯಾಗಿ 132 ಯುದ್ಧನೌಕೆಗಳು, 143 ವಿಮಾನ ಹಾಗೂ 130 ಹೆಲಿಕಾಪ್ಟರ್ ಗಳನ್ನು ನಿಯೋಜಿಸಲು ಉದ್ದೇಶಿಸಿದೆ. ಇದರ ಜತೆಗೆ ಮುಂದಿನ ಪೀಳಿಗೆಯ ಎಂಟು ಬೆಂಗಾವಲು ನೌಕೆ, ಒಂಬತ್ತು ಸಬ್‍ಮೆರಿನ್‍ಗಳು, 5 ಕಣ್ಗಾವಲು ನೌಕೆ ಮತ್ತು ಎರಡು ಬಹು ಉದ್ದೆಶದ ಹಡಗುಗಳನ್ನು ಭಾರತದಲ್ಲಿ ನಿರ್ಮಿಸಲು ಅನುಮೋದನೆ ಪಡೆದಿದೆ.

ಭಾರತದ ಶಿಪ್‍ಯಾರ್ಡ್‍ಗಳಲ್ಲಿ ನಿಧಾನಗತಿಯ ನಿರ್ಮಾಣ, ಪ್ರಗತಿಪರವಾಗಿ ಹಳೆ ಯುದ್ಧನೌಕೆಗಳ ವಿಲೇವಾರಿ, ಹಣಕಾಸು ಮುಗ್ಗಟ್ಟಿನಿಂದಾಗಿ ಭಾರತೀಯ ನೌಕಾಪಡೆ 2030ರ ವೇಳೆಗೆ 155-160 ಯುದ್ಧನೌಕೆಗಳನ್ನು ಹೊಂದುವ ಸಾಧ್ಯತೆ ಇದೆ. ಈ ಅಂಕಿ ಅಂಶಗಳು ಚಲನಶೀಲ. ಆದರೆ 200 ಸಾಧ್ಯವಾಗದಿದ್ದರೂ, 2035ರ ಒಳಗಾಗಿ 175 ಯುದ್ಧನೌಕೆಗಳನ್ನು ನಿರ್ಮಿಸುವ ಮೂಲಕ ವಿಶ್ವಾಸಾರ್ಹ ಆಯಕಟ್ಟಿನ ಮಟ್ಟವನ್ನು ತಲುಪುವುದು, ಹಿಂದೂಮಹಾಸಾಗರ ಪ್ರದೇಶದಲ್ಲಿ ಸಂಚಾರ ಹಾಗೂ ಸ್ಥಿತಿಸ್ಥಾಪಕತ್ವವನ್ನು ಹೆಚ್ವಿಸುವುದು ನಮ್ಮ ಉದ್ದೇಶ. ಯುದ್ಧವಿಮಾನಗಳು, ವಿಮಾನಗಳು, ಹೆಲಿಕಾಪ್ಟರ್ ಗಳು ಮತ್ತು ಡ್ರೋಣ್‍ಗಳಲ್ಲಿ ಕೂಡಾ ಗಣನೀಯ ಹೆಚ್ಚಳ ಕಾಣಲಿದ್ದೇವೆ  ಎಂದು ಮೂಲಗಳು ಸ್ಪಷ್ಟಪಡಿಸಿವೆ.

LEAVE A REPLY

Please enter your comment!
Please enter your name here