ಮಂಗಳೂರು(ದುಬೈ): ದುಬೈ ಪ್ರವಾಸದಲ್ಲಿರುವ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಇಲ್ಲಿನ ಜುಮೇರಾ ಲೇಕ್ ಟವರ್ ತಾಜ್ ಹೊಟೇಲಿನಲ್ಲಿ ಕಾಂಗ್ರೆಸ್ ನ ಇಂಡಿಯನ್ ಓವರ್ಸೀಸ್ ಯುಎಇ ಘಟಕದ ಸದಸ್ಯರು ಸ್ವಾಗತಿಸಿ, ಅಭಿನಂದಿಸಿ ಸೌಹಾರ್ದ ಮಾತುಕತೆ ನಡೆಸಿದರು.
ಘಟಕದ ಸದಸ್ಯರಾದ ಪರ್ವೇಝ್ ಜಿ.ಕೆ, ಇಕ್ಬಾಲ್ ಕಣ್ಣೂರು, ಅನ್ವರ್ ಮಾಣಿಲ, ಮೂಸಾ ಪೆರುವಾಯಿ ಅವರೊಂದಿಗೆ ಸೌಹಾರ್ದ ಮಾತುಕತೆ ನಡೆಸಿದ ಶಾಸಕರು ಅನಿವಾಸಿ ಭಾರತೀಯರ ಅತ್ಮೀಯತೆ ಮತ್ತು ಚುನಾವಣೆ ಸಂದರ್ಭದಲ್ಲಿ ತಮ್ಮ ಗೆಲುವಿಗಾಗಿ ಪರೋಕ್ಷವಾಗಿ ಸಹಕರಿಸಿದ ಘಟಕದ ಎಲ್ಲಾ ಸದಸ್ಯರಿಗೆ ಶಾಸಕ ಅಶೋಕ್ ರೈ ಕೃತಜ್ಞತೆ ಸಲ್ಲಿಸಿ ಶ್ಲಾಘಿಸಿದರು.