ಪ್ರಾಣಿ ಪ್ರಪಂಚ-94

ಉವಾಕಾರಿ (Cacajao calvus)

ಮಕ್ಕಳಿಗಾಗಿ ವಿಶೇಷ ಮಾಹಿತಿ

ಉವಾಕಾರಿಯು ಮಂಗಗಳ ಉಪ ವರ್ಗಕ್ಕೆ ಸೇರಿದೆ. ದಕ್ಷಿಣ ಅಮೇರಿಕಾದ ಉಷ್ಣ ವಲಯದ ಮಳೆ ಅರಣ್ಯಗಳಲ್ಲಿ ಇರುತ್ತವೆ. ಅವುಗಳ ಮುಖವು ಗುಲಾಬಿ, ದಟ್ಟ ಕೆಂಪುಬಣ್ಣದಿಂದ ಕೂಡಿವೆ. ಇವುಗಳು 45 ಸೆಂ.ಮೀ. ಉದ್ದ ಹಾಗೂ 3 ಕೆ.ಜಿ ತೂಕವಿರುತ್ತವೆ. ಮಂಗಗಳ ಬಾಲವು ಚಿಕ್ಕದಾಗಿರುತ್ತವೆ. ಅವುಗಳ ದೇಹದ ಗಾತ್ರಕ್ಕಿಂತ ಅವುಗಳ ತುಪ್ಪಳವು ದಟ್ಟ ಹಾಗೂ ಒರಟಾಗಿರುತ್ತದೆ. ತುಪ್ಪಳವು ಕೆಂಪು, ಕಂದು, ಕಪ್ಪು, ಬಿಳಿ, ಹೀಗೆ ವಿಧ ವಿವಿಧ ಬಣ್ಣಗಳಲ್ಲಿರುತ್ತವೆ. ಮಂಗಗಳು ಪ್ರಾಣಿ ಸಂಗ್ರಹಾಲಯಗಳಲ್ಲಿ ಶಾಂತವಾಗಿರುತ್ತವೆ.

 

LEAVE A REPLY

Please enter your comment!
Please enter your name here