ಮಂಗಳೂರು(ದೇವನಹಳ್ಳಿ): 7 ತಿಂಗಳ ಗರ್ಭಿಣಿ ಮಹಿಳೆಯೊಬ್ಬರು ಸ್ಯಾಕ್ಸೋಫೋನ್ ನುಡಿಸಿ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಳಿಯ ಆವಲಹಳ್ಳಿ ಗ್ರಾಮದ ಮಹಿಳೆ ಸುಬ್ಬಲಕ್ಷ್ಮೀ ಸತತ 23 ಗಂಟೆಗಳ ಕಾಲ ಸ್ಯಾಕ್ಸೋಪೋನ್ ನುಡಿಸುವ ಮೂಲಕ ಗಿನ್ನಿಸ್ ಪುಸ್ತಕದಲ್ಲಿ ದಾಖಲಾಗಿದ್ದಾರೆ.
ಕಳೆದ 13 ವರ್ಷದಿಂದ ಆವಲಹಳ್ಳಿಯ ಕಲಾವಿದೆ ಸುಬ್ಬಲಕ್ಷ್ಮೀ ಸ್ಯಾಕ್ಸೋಪೋನ್ ನುಡಿಸುತ್ತಿದ್ದು, ಕನ್ನಡ, ತೆಲುಗು, ಇಂಗ್ಲೀಷ್, ಹಿಂದಿ ಭಾಷೆಗಳ ಗೀತೆಗಳನ್ನು ಸ್ಯಾಕ್ಸೋಪೋನ್ನಲ್ಲಿ ನುಡಿಸುತ್ತಿದ್ದರು. ಸುಬ್ಬಲಕ್ಷ್ಮೀ ಏಳು ತಿಂಗಳು ಗರ್ಭಿಣಿಯಾಗಿದ್ದು, ಸೆ.17 ಭಾನುವಾರ ದಿನಪೂರ್ತಿ ಬಿಡುವಿಲ್ಲದೆ 23 ಗಂಟೆಗಳ ಕಾಲ ನಿರಂತರ ಸ್ಯಾಕ್ಸೋಪೋನ್ ನುಡಿಸುವ ಮೂಲಕ ದಾಖಲೆ ನಿರ್ಮಿಸಿದ್ದು, ಸುಬ್ಬಲಕ್ಷ್ಮೀ ಅವರ ಸಾಧನೆ ವರ್ಲ್ಡ್ ಗಿನ್ನಿಸ್ ರೆಕಾರ್ಡ್ ಬುಕ್ನಲ್ಲಿ ದಾಖಲಾಗಿದೆ.