ನವ ಭವಿಷ್ಯಕ್ಕೆ ನಾಂದಿ ಹಾಡಲು ಹೊಸ ಸಂಸತ್‌ ಭವನಕ್ಕೆ ಹೆಜ್ಜೆ- ಪ್ರಧಾನಿ ಮೋದಿ

ಮಂಗಳೂರು(ನವದೆಹಲಿ): ಸೆಂಟ್ರಲ್‌ ಹಾಲ್‌ ನಮ್ಮ ಭಾವನೆಗಳಿಂದ ತುಂಬಿದ್ದು, ನವ ಭವಿಷ್ಯ ಆರಂಭಿಸಲು ಹೊಸ ಸಂಸತ್‌ ಭವನದತ್ತ ಹೆಜ್ಜೆ ಇಡುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂದು ಹಳೆಯ ಸಂಸತ್‌ ಕಟ್ಟಡದ ಸೆಂಟ್ರಲ್‌ ಹಾಲ್‌ನಲ್ಲಿ ಮಾತನಾಡಿದ ಪ್ರಧಾನಿ ಭಾಷಣದ ಮೂಲಕ ಹಳೆ ಸಂಸತ್​ ಭವನದಲ್ಲಿ ಕಲಾಪಕ್ಕೆ ವಿದಾಯ ಹೇಳಿದರು.

ಭಾರತ ಶೀಘ್ರದಲ್ಲಿ ವಿಶ್ವದ 3ನೇ ಆರ್ಥಿಕ ರಾಷ್ಟ್ರವಾಗಲಿದ್ದು, ದೇಶದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡಲಾಗಿದೆ. ನಮ್ಮ ಕ್ರೀಡಾಪಟುಗಳು ಜಾಗತಿಕ ಮಟ್ಟದಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ ಎಂದರು. ಜಾಗತಿಕವಾಗಿ ಭಾರತದ ಸಾಧನೆ ಚರ್ಚೆಯ ವಿಷಯವಾಗಿದೆ. ನಮ್ಮ ವೇಗದ ಅಭಿವೃದ್ಧಿಯನ್ನು ಇಡೀ ವಿಶ್ವ ಬೆರಗುಗಣ್ಣಿನಿಂದ ನೋಡುತ್ತಿದೆ. ಎಂದು ಹೇಳಿದ ಮೋದಿ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ, ಚಂದ್ರಯಾನ ಯಶಸ್ವಿಯಾಗಿದೆ, ನಮ್ಮ ಆತ್ಮನಿರ್ಭರ್ ಯೋಜನೆಗಳು ಯಶಸ್ವಿಯಾಗಿವೆ, ನಮ್ಮ ಆಲೋಚನೆಗಳು ಹೊಸದನ್ನು ಕಲಿಯಲು ಪ್ರಯತ್ನಿಸುತ್ತಿವೆ ಎಂದು ಹೇಳಿದರು.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here